ಬ್ರಹ್ಮಾವರ : ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣ್ಣು ಸರಿಯಾಗಿ ಕಾಣದಿರುವ ಬಗ್ಗೆ ಚಿಂತೆಯಿಂದ ಜೀವನದಲ್ಲಿ ಜಿಗುಪ್ಪೆಗೊಂಡ ಬಾರಕೂರು ಹೊಸಾಳ ನಿವಾಸಿ ಚಂದ್ರಶೇಖರ ಶೆಟ್ಟಿ (58) ಎಂಬವರು ಜು.19ರಂದು ಸಂಜೆ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೊಲ್ಲೂರು: ಗ್ರಾಮದ ಮಾರಣಕಟ್ಟೆ ನಿವಾಸಿ ನಾರಾಯಣ ದೇವಾಡಿಗ (65) ಎಂಬವರು ಜೀವನದಲ್ಲಿ ಜಿಗುಪ್ಪೆಗೊಂಡು ಜು.19ರಂದು ರಾತ್ರಿ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ವಿಪರೀತ ಕುಡಿತದ ಚಟ ಹೊಂದಿದ್ದ ತಲ್ಲೂರು ಹೇರಿಕುದ್ರು ನಿವಾಸಿ ಪ್ರಶಾಂತ ಶೆಟ್ಟಿ(45) ಎಂಬವರು ಜು.20ರಂದು ಬೆಳಗ್ಗೆ ತಲ್ಲೂರಿನ ಪ್ರವಾಸಿ ಬಾರಿನ ಸಮೀಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/07/2022 05:27 pm