ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾಡಿನ ಹಿರಿಯ ಚಿಂತಕ ,ಜನಪರ ಹೋರಾಟಗಾರ ಜಿ.ರಾಜಶೇಖರ್ ವಿಧಿವಶ

ಉಡುಪಿ: ನಾಡಿನ ಹಿರಿಯ ಚಿಂತಕ, ಲೇಖಕ, ವಿಮರ್ಶಕ ಹಾಗು ಜನಪರ ಹೋರಾಟಗಾರ ಜಿ.ರಾಜಶೇಖರ್ (75) ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

2019ರಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀರಾ ಗಂಭೀರ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ವಿಶೇಷವಾಗಿ ಕೋಮುವಾದದ ವಿರುದ್ಧ ಧ್ವನಿ ಎತ್ತಿ ಅದರ ವಿರುದ್ಧದ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ರಾಜಶೇಖರ್ ಅವರು, ಕೋಮುಗಲಭೆಗಳು ನಡೆದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಸತ್ಯಶೋಧನಾ ವರದಿಗಳನ್ನು ಬರೆದಿದ್ದರು. ಅಲ್ಪಸಂಖ್ಯಾತರು, ದಲಿತ ದಮನಿತರು ಹಾಗು ಎಲ್ಲ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಟದಲ್ಲಿ ಸದಾ ಮೊದಲಿಗರಾಗಿ ಭಾಗವಹಿಸುತ್ತಿದ್ದರು. ಅತ್ಯಂತ ನೇರ, ನಿಷ್ಠುರ ಮಾತುಗಳು ಹಾಗು ವಿಶ್ಲೇಷಣೆಗಳಿಗೆ ಅವರು ಖ್ಯಾತಿ ಪಡೆದಿದ್ದರು.ಇವರು ಪತ್ನಿ ,ಇಬ್ಬರು ಪುತ್ರರು ಮತ್ತು ಅಪಾರ ಬಂಧುಗಳು ಮತ್ತು ಅಭಿಮಾನಿಗಳನ್ಬು ಅಗಲಿದ್ದಾರೆ.

Edited By : PublicNext Desk
PublicNext

PublicNext

21/07/2022 05:56 am

Cinque Terre

28.67 K

Cinque Terre

1

ಸಂಬಂಧಿತ ಸುದ್ದಿ