ಉಡುಪಿ: ಭಜನೆ ಜಬ್ಬಣ್ಣ'ರೆಂದೇ ಪ್ರಖ್ಯಾತರಾಗಿದ್ದ ಜಬ್ಬ ಪೂಜಾರಿ (90 ) ಬಂಕೇರಕಟ್ಟ, ಅಂಬಲಪಾಡಿ ಇವರು ಜು.6ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಬಿಲ್ಲವ ಸೇವಾ ಸಂಘ ,ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ ಪದಾಧಿಕಾರಿಯಾಗಿ, ಭಜನಾ ನಿರ್ವಾಹಕರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ಜಬ್ಬ ಪೂಜಾರಿಯವರು ಸಂಘದ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾಗಿ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ಭಜನಾಸಕ್ತರಾಗಿದ್ದ ಜಬ್ಬ ಪೂಜಾರಿಯವರು ಸ್ವತಃ ತಮ್ಮ ಮನೆಯಲ್ಲಿ ನಿತ್ಯ ಭಜನೆ ನೆರವೇರಿಸುವ ಜೊತೆಗೆ ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಭಜನಾ ಸೇವೆಯ ನೇತೃತ್ವವನ್ನು ವಹಿಸಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರು, ಮೂವರು ಪುತ್ರಿಯರು, ಬಂಧುಗಳು ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.
Kshetra Samachara
07/07/2022 08:55 pm