ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆ ಬೈ ಪಾಸ್ ನಲ್ಲಿ ರಿಕ್ಷಾ ಚಲಾಯಿಸಿಕೊಂಡಿರುವ ಅನಿಲ್ ಫೆರ್ನಾಂಡೀಸ್ ತಮ್ಮ ರಿಕ್ಷಾದಲ್ಲಿ ಮಹಿಳೆಯೊಬ್ವರು ಬಿಟ್ಟು ಹೋಗಿದ್ದ ಕರಿಮಣಿ ಸರವನ್ನು ಆ ಮಹಿಳೆಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಳಗ್ಗಿನ ಜಾವ ಬೆಂಗಳೂರಿನಿಂದ ಬಂದಿದ್ದ ಯಶೋಧ ಆಟೋದಲ್ಲಿ ಮನೆಗೆ ಹೋಗುವಾಗ ಕರಿಮಣಿ ಸರ ಬಿದ್ದಿತ್ತು. ಚಾಲಕ ಅನಿಲ್ ಮಹಿಳೆಯನ್ನು ಮನೆಗೆ ಬಿಟ್ಟು ನಂತರ ವಾಪಾಸು ಯಡ್ತರೆ ಸ್ಟಾಂಡಿಗೆ ಬಂದು ರಿಕ್ಷಾವನ್ನು ನಿಲ್ಲಿಸಿ ಸ್ವಚ್ಛ ಗೊಳಿಸುವಾಗ ಒಂದು ಚಿನ್ನದ ಕರಿಮಣಿ ಸಿಕ್ಕಿತ್ತು.
ತಕ್ಷಣ ಅವರು ಆ ಚಿನ್ನದ ಕರಿಮಣಿ ಸರವನ್ನು ಬೈಂದೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ನಂತರ ಯಶೋಧಾಗೆ ವಿಷಯ ತಿಳಿದು ಬೈಂದೂರು ಠಾಣಾಧಿಕಾರಿಯವರನ್ನು ಸಂಪರ್ಕಿಸಿದ್ದಾರೆ. ಬಳಿಕ ಚಾಲಕನ ಸಮಕ್ಷಮ 1.50 ಲಕ್ಷ ಮೌಲ್ಯದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಯಶೋಧಾ ಅವರಿಗೆ ಹಸ್ತಾಂತರಿಸಲಾಯಿತು.
Kshetra Samachara
27/06/2022 03:27 pm