ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ: ಜೀವ ಉಳಿಸಿದ ಆಪದ್ಬಾಂಧವರು

ಉಡುಪಿ: ಆತ್ಮಹತ್ಯೆಗೆ ಜನ ಏಕೋ ಉಡುಪಿಯ ವಸತಿಗೃಹವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆ. ಇವತ್ತು ಉಡುಪಿಯ ಆಪತ್ಬಾಂಧವರ ಸಮಯಪ್ರಜ್ಞೆಯಿಂದ ಆತ್ಮಹತ್ಯೆಗೈಯಲು ಬಂದಿದ್ದ ವ್ಯಕ್ತಿಯೊಬ್ಬರು ಬದುಕುಳಿದಿರುವ ಘಟನೆ ನಡೆದಿದೆ.

ಮನನೊಂದು ಬಂದಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೈಯಲು ಉಡುಪಿಯ ಖಾಸಗಿ ವಸತಿಗೃಹಗಳಲ್ಲಿ ಸ್ಥಳಾವಕಾಶ ಹುಡುಕುತ್ತಿದ್ದರು. ಈ ಬಗ್ಗೆ ವಿಷಯ ತಿಳಿದ ಉಡುಪಿಯ ಸಮಾಜಸೇವಕರು ಮನನೊಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಬಳಿಕ ಮನವೊಲಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ ಪ್ರಸಂಗ ನಡೆಯಿತು. ಈ ವ್ಯಕ್ತಿ ಹೊಟೇಲೊಂದರಲ್ಲಿ ಬಾಣಸಿಗರಾಗಿದ್ದರೆಂದು ತಿಳಿದುಬಂದಿದೆ.

ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಸಮಾಜಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಒಳಕಾಡು, ದೀಪಕ್, ಹರೀಶ್ ಅಮೀನ್ ಭಾಗಿಯಾಗಿದ್ದರು.

Edited By : Shivu K
Kshetra Samachara

Kshetra Samachara

22/06/2022 01:29 pm

Cinque Terre

5.71 K

Cinque Terre

0

ಸಂಬಂಧಿತ ಸುದ್ದಿ