ಕಾಪು: ತಾಯಿ ಮತ್ತು ಮಗು ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಎಂಬಲ್ಲಿ ನಡೆದಿದೆ.ಪಕೀರಣಕಟ್ಟೆ ಬಳಿಯ ನಿವಾಸಿ ಅಬುದಾಬಿಯಲ್ಲಿ ಉದ್ಯೋಗದಲ್ಲಿರುವ ರಿಜ್ವಾನ್ ಅಹಮದ್ ಅವರ ಪತ್ನಿ ರೈಸಾ ತಬಸ್ಸುಂ (26) ಮತ್ತು 2 ವರ್ಷ 10 ತಿಂಗಳು ಪ್ರಾಯದ ಮಗ ಇಜಾನ್ ಅಹ್ಮದ್ ನಾಪತ್ತೆಯಾಗಿದ್ದಾರೆ.
ಜೂ. 1ರಂದು ಬೆಳಗ್ಗೆ ತಬಸ್ಸುಂ ಅವರು, ತಾನು ಮಲ್ಲಾರಿನಲ್ಲಿರುವ ತಾಯಿ ಮನೆಗೆ ಹೋಗಿ ಬರುವುದಾಗಿ ಅತ್ತೆ ಬಳಿ ಹೇಳಿ ಮಗನೊಂದಿಗೆ ತೆರಳಿದ್ದರು. ಜೂ. 2ರಂದು ರೈಸಾ ತಬಸ್ಸುಂ ಅವರ ತಾಯಿ ದೂರವಾಣಿ ಕರೆ ಮಾಡಿದ್ದು, ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ,
ಈ ಬಗ್ಗೆ ರೈಸಾ ತಬಸ್ಸುಂ ಅವರ ಅತ್ತೆ ಮುಮ್ತಾಜ್, ತನ್ನ ಸೊಸೆ ಮೊಮ್ಮಗನೊಂದಿಗೆ ತಾಯಿ ಮನೆಗೂ ಹೋಗದೆ, ಮರಳಿ ಅತ್ತೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Kshetra Samachara
07/06/2022 09:38 am