ಮೂಡುಬಿದಿರೆ: ಎಐಕೆಎಮ್ ಸಿಸಿ ಮೂಡುಬಿದಿರೆ ತಾಲುಕು ಸಮಿತಿ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಪಡುಮಾರ್ನಾಡು ಜಿ.ಕೆ. ಗಾರ್ಡನ್ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು.
ಎಐಕೆಎಮ್ ಸಿಸಿ ಅಖಿಲ ಭಾರತ ಅಧ್ಯಕ್ಷ ಎಮ್ಕೆ ನೌಶಾದ್, ಡಾ| ಅಮೀರ್, ಮುನೀರ್, ಜಿಲ್ಲಾಧ್ಯಕ್ಷ ಸಲೀಂ ಹಂಡೇಲ್, ಜಿಲ್ಲಾ ಕಾರ್ಯದರ್ಶಿ ಅಫ್ಹಾಮ್ ತಂಙಳ್ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಮುಹಮ್ಮದ್ ಸಚ್ಚೇರಿಪೇಟೆ, ಎಚ್ಎಮ್ ಅಬ್ದುಲ್ ಖಾದರ್, ಎಸ್ಎ ಗಫೂರ್, ಪಾರ್ಕರ್ ಶರೀಫ್ ಸಾಹೇಬ್, ಅಬ್ದುಲ್ ರಹ್ಮಾನ್(ಅಬ್ಬಾಕ), ಇಸಾಕ್ ಹಾಜಿ, ಹನೀಫ್ ತೋಡಾರ್, ಝುಲೈಖಾ ತೋಡಾರ್, ಬೀಫಾತಿಮ ಹಂಡೇಲು, ಮರಿಯಮ್ಮ ಮೂಡುಬಿದಿರೆ ಅವರನ್ನು ಸನ್ಮಾನಿಸಲಾಯಿತು.
ಸಮಿತಿ ಕಾರ್ಯದರ್ಶಿ ಇರ್ಷಾದ್ ಎನ್ ಜಿ., ಉಪಾಧ್ಯಕ್ಷರಾದ ಸಲಾಂ ಬೂಟ್ ಬಝಾರ್, ಉಸ್ಮಾನ್ ಸೂರಿಂಜೆ, ಖಜಾಂಚಿ ಅಶ್ರಫ್ ವಾಲ್ಪಾಡಿ, ಇಮ್ತಿಯಾಝ್, ಕೆ. ಎಸ್. ಅಬೂಬಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.
Kshetra Samachara
26/05/2022 02:10 pm