ಸಾಲಿಗ್ರಾಮ: ಸರಿಸುಮಾರು 40 ವರ್ಷಗಳಿಂದಲೂ ಕಲಾದೇವಿಯನ್ನು ಆರಾಧನೆ ಮಾಡುತ್ತಾ ಬಂದಿರುವ ಸಾಲಿಗ್ರಾಮ ಮೂಲದ ಮಂಟಪ ಕೇಶವ ಆಚಾರ್ಯರು ದೇವಸ್ಥಾನದ ಮಂಟಪಗಳ ನಿರ್ಮಾಣ ಕಾರ್ಯದಲ್ಲಿ ಬಲು ಪರಿಣತರು.
ಈ ಕಾರಣದಿಂದ ಅವರಿಗೆ ʼಮಂಟಪ ಕೇಶವ ಆಚಾರ್ಯʼ ಎಂಬ ಹೆಸರು ಬಂದಿದೆ. ಕರ್ನಾಟಕದ ಅನೇಕ ಜಿಲ್ಲೆಗಳ ದೇವಸ್ಥಾನಗಳಿಗೆ ಬೆಳ್ಳಿ ವಿಗ್ರಹ, ಬೆಳ್ಳಿ ದ್ವಾರ ಮುಂತಾದ ಶಿಲ್ಪಕಲಾ ಮೆರುಗಿನ ಕೈಂಕರ್ಯದ ಮೂಲಕ ಹೆಸರುವಾಸಿಯಾಗಿದ್ದಾರೆ.
ವಯಸ್ಸು 80 ದಾಟಿದರೂ ಇನ್ನೂ ಶಿಲ್ಪಕಲೆ ಮೇಲಿನ ಪ್ರೀತಿ-ಅಭಿಮಾನ ಕಿಂಚಿತ್ತೂ ಕಮ್ಮಿಯಾಗಿಲ್ಲ. ಮಂಟಪ ಕೇಶವ ಆಚಾರ್ಯ ಅವರ ಪುತ್ರ ಕೂಡ ತನ್ನ ತಂದೆಯ ಕಾಯಕವನ್ನು ಮುಂದುವರೆಸಿದ್ದು, ಇಂದಿನ ಯುವ ಶಿಲ್ಪಕಲಾಕಾರರಿಗೆ ಮತ್ತಷ್ಟು ಸ್ಫೂರ್ತಿ ತುಂಬಿದ್ದಾರೆ.
PublicNext
06/05/2022 11:25 am