ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ರಥಶಿಲ್ಪ ಕಲೆಯಲ್ಲಿ "ಅತಿರಥ" ಈ ಲಕ್ಷ್ಮೀನಾರಾಯಣ ಆಚಾರ್ಯ

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ಮೂಲದ ಲಕ್ಷ್ಮೀನಾರಾಯಣ ಆಚಾರ್ಯ ರಥ ಶಿಲ್ಪಿಯಾಗಿ ಸರಿಸುಮಾರು 50 ವರ್ಷಗಳಿಗಿಂತಲೂ ಅಧಿಕವಾಗಿ ರಥ ಕೆತ್ತನೆ, ಮೂರ್ತಿ ಕೆತ್ತನೆ ಮಾಡುತ್ತಾ ಬಂದಿದ್ದಾರೆ!

ಇದುವರೆಗೆ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನ ರಥಗಳ ಸಹಿತ 200 ಹೆಚ್ಚು ರಥಗಳನ್ನು ನಿರ್ಮಾಣ ಮಾಡಿರುವ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇದೀಗ ನೂತನವಾಗಿ ನಿರ್ಮಾಣವಾಗುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರಕ್ಕೂ ಇವರು ರಥ ನಿರ್ಮಾಣದ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಲಕ್ಷೀನಾರಾಯಣ ಆಚಾರ್ಯ ಅವರು ರಥಶಿಲ್ಪ ಕಲೆಯಲ್ಲಿ ಅಪಾರ ಜ್ಞಾನ ಉಳ್ಳವರಾಗಿದ್ದು, ಶಿಲ್ಪಕಲೆಯ ಬಗ್ಗೆ ಆಸಕ್ತಿವುಳ್ಳ ವಿದ್ಯಾರ್ಥಿಗಳಿಗೆ ತರಬೇತಿ ಶಾಲೆಯನ್ನು ನಡೆಸುವ ಮೂಲಕ ಶಿಕ್ಷಣವನ್ನು ಕೂಡ ಒದಗಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

Edited By : Shivu K
PublicNext

PublicNext

05/05/2022 03:34 pm

Cinque Terre

33.61 K

Cinque Terre

2

ಸಂಬಂಧಿತ ಸುದ್ದಿ