ಕಾಪು: ಉಡುಪಿ ಜಿಲ್ಲೆಯ ಉತ್ಸಾಹಿ ಸಾಹಸಿ ಬೈಕ್ ಕ್ರೀಡಾಳುಗಳಾದ ಸಚಿನ್ ಶೆಟ್ಟಿ ಕಾಪು, ಅರ್ಜುನ್ ಪೈ ಮಣಿಪಾಲ, ಸಾಯಿಕಿರಣ್, ಅರುಣ್ ಕುಲಾಲ್ ಅವರು ಫೆ. 26 ರಂದು ಬೈಕ್ ಮೂಲಕ ದೆಹಲಿಯಿಂದ ಪ್ರಾರಂಭಿಸಿ ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತಾರಖಂಡ, ನೇಪಾಳ, ಹರ್ಯಾಣ, ಪಂಜಾಬ್ ಮೊದಲಾದ ಕಡೆಗಳಲ್ಲಿ ನಡೆಸಿದ ಸುಮಾರು 9000 ಕಿ.ಮೀ ಬೈಕ್ ಸಂಚಾರ ಯಾತ್ರೆಯನ್ನು ಕಾಪುವಿನಲ್ಲಿ ಸಮಾಪನಗೊಳಿಸಲಾಯಿತು.
ಬೈಕ್ ಯಾತ್ರೆಯ ಮೂಲಕ 51 ದಿನಗಳಲ್ಲಿ ಒಂಭತ್ತು ಸಾವಿರ ಕಿ.ಮೀ ದೂರ ಕ್ರಮಿಸಿ ಕಾಪುವಿಗೆ ಆಗಮಿಸಿದ ಯುವಕರ ತಂಡವನ್ನು ಕಾಪುವಿನಲ್ಲಿ ಸಮಾಜ ಸೇವಕ ಲೀಲಾಧರ ಶೆಟ್ಟಿ ಅವರ ನೇತೃತ್ವದಲ್ಲಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು. ಸಚಿನ್ ಶೆಟ್ಟಿ ನೇತೃತ್ವದ ನಾಲ್ಕು ಮಂದಿ ಯುವಕರ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಬೈಕ್ ಯಾತ್ರೆಯ ವೇಳೆ ಇಂಡೋ ಚೀನಾ ಗಡಿ ಪ್ರದೇಶದ 15,300 ಅಡಿ ಎತ್ತರದ ಝುಪಾಕ್‌ನಲ್ಲಿ ತುಳುನಾಡ ಧ್ವಜವನ್ನು ಹಾರಿಸಿ ಅವರು ತುಳು ಪ್ರೇಮ ಮೆರೆದಿದ್ದರು. ಇವರ ತುಳು ಭಾಷಾ ಪ್ರೇಮಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿತ್ತು.
PublicNext
19/04/2022 01:51 pm