ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲು ನಿಲ್ದಾಣದಲ್ಲಿ ಖಿನ್ನತೆಗೆ ಒಳಗಾದ ಯುವತಿ ಪತ್ತೆ-ಆಶ್ರಯ ಕಲ್ಪಿಸಿದ ಪೊಲೀಸರು !

ಕಡಬ: ನೆಟ್ಟಣದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಒಂಟಿಯಾಗಿ ಅಳೆದಾಡುತ್ತಿದ್ದ ಯುವತಿಯನ್ನು ಕಡಬ ಪೊಲೀಸರು ರಕ್ಷಿಸಿ ಮಂಜೇಶ್ವರದ ಆಶ್ರಮವೊಂದರಲ್ಲಿ ಆಶ್ರಯ ಕಲ್ಪಿಸಿದ್ದಾರೆ.

ಸಾರ್ವಜನಿಕರ ಮಾಹಿತಿ ಆಧಾರಿಸಿ ರೈಲು ನಿಲ್ದಾಣಕ್ಕೆ ತೆರಳಿದ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ವಿಚಾರಿಸಿದ್ದಾರೆ. ಈಕೆ ಮಾನಸಿಕ ಖಿನ್ನತೆಗೆ ಒಳಗಾಗಿರುವಂತೆ ಕಂಡಿದ್ದು, ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಎಸ್.ಮೇಗಡಿ ಹಳ್ಳಿಯ ಮಹದೇವಯ್ಯ-ಕಾವೇರಮ್ಮ ದಂಪತಿ ಪುತ್ರಿ ಎಂದು ತಿಳಿದು ಬಂದಿದೆ.

ಆಕೆಯನ್ನು ಮನೆಯವರು ಸೇರಿಸಿಕೊಳ್ಳುತ್ತಿಲ್ಲ ಎಂಬ ವಿಚಾರ ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಠಾಣೆಗೆ ಕರೆತಂದು ಉಪಚರಿಸಿ ಮಂಗಳೂರಿನ ಜೆಪ್ಪಿನಮೊಗರು ಪ್ರಜ್ಞಾ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿ ಆಕೆ ಮಾನಸಿಕವಾಗಿ ಜರ್ಜರಿತಗೊಂಡು ವಿಚಿತ್ರವಾಗಿ ವರ್ತಿಸಿಸುತ್ತಿದ್ದ ಕಾರಣ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದರು. ಬಳಿಕ ಕಡಬದ ಅಂಬುಲೆನ್ಸ್ ನಲ್ಲಿ ಕಾಸರಗೋಡು ಮಂಜೇಶ್ವರದ ಸ್ನೇಹಾಲಯಕ್ಕೆ ಕಳುಹಿಸಲಾಗಿದೆ.

ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರ ನಿರ್ದೇಶನದಂತೆ ಈಕೆಯನ್ನು ಹೆಡ್ ಕಾನ್ಸ್ಟೇಬಲ್ ರಾಜು ಮತ್ತು ಮಹಿಳಾ ಸಿಬ್ಬಂದಿ ಚಂದ್ರಿಕಾ ರವರ ಭದ್ರತೆಯಲ್ಲಿ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

Edited By :
Kshetra Samachara

Kshetra Samachara

24/03/2022 03:24 pm

Cinque Terre

3.6 K

Cinque Terre

0

ಸಂಬಂಧಿತ ಸುದ್ದಿ