ಉಡುಪಿ: ಉಡುಪಿ ನಗರದ ಹಲವೆಡೆ ಭಿಕ್ಷೆ ಬೇಡುತ್ತಿದ್ದ ಆಂದ್ರ ಪ್ರದೇಶ ಮೂಲದ ಅಜ್ಜಿಯನ್ನು ಹಿರಿಯ ನಾಗರಿಕ ಸಹಾಯ ವಾಣಿಯ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.
ಬಳಿಕ ಆಕೆಯನ್ನು ಹೊಸಬೆಳಕು ಆಶ್ರಮಕ್ಕೆ ಸೇರಿಸಿದ ಘಟನೆ ನಡೆಯಿತು. ರಕ್ಷಣಾ ಕಾರ್ಯದಲ್ಲಿ ಹೊಸಬೆಳಕು ಸಂಸ್ಥೆಯ ವಿನಯಚಂದ್ರ, ಹಿರಿಯ ನಾಗರಿಕ ಸಹಾಯವಾಣಿಯ ಪೂರ್ಣಿಮಾ, ರಂಜಿತ್, ಪೊಲೀಸ್ ಸಿಬ್ಬಂದಿ ಜ್ಯೋತಿ, ಹರೀಶ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಸಹಕರಿಸಿದ್ದಾರೆ.
ವಾರಸುದಾರರು ಹೊಸಬೆಳಕು ಆಶ್ರಮವನ್ನು ಸಂಪರ್ಕಿಸುವಂತೆ ಕೋರಲಾಗಿದೆ.
PublicNext
22/03/2022 07:59 pm