ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿವಸ್ತ್ರಳಾಗಿ ತಿರುಗಾಡುತ್ತಿದ್ದ ಅನ್ಯರಾಜ್ಯದ ವೃದ್ಧೆಯ ರಕ್ಷಣೆ: ಆಸ್ಪತ್ರೆಗೆ ದಾಖಲು!

ಉಡುಪಿ: ಕಲ್ಯಾಣಪುರ,ಸಂತೆಕಟ್ಟೆ ರಾಷ್ಟೀಯ ಹೆದ್ದಾರಿಯಲ್ಲಿ ಮಹಿಳೆಯೋರ್ವರು ವಿವಸ್ತ್ರಳಾಗಿ ತಿರುಗಾಡುತ್ತಿದ್ದು ಸಮಾಜ ಸೇವಕ ವಿಶು ಶೆಟ್ಟಿಯವರು ಆಕೆಯನ್ನು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಮಹಿಳೆಯ ರಕ್ಷಣಾ ಕಾರ್ಯದಲ್ಲಿ ಮಹಿಳಾ ಠಾಣೆಯ ಪೊಲೀಸರು ಹಾಗೂ ಕಲ್ಯಾಣಪುರ ಪಂಚಾಯತ್‌ನ ಮಾಜಿ ಅಧ್ಯಕ್ಷ ಸತೀಶ್ ಸಹಕರಿಸಿದ್ದಾರೆ. ಮಹಿಳೆಯ ಪೂರ್ವಾಪರ ತಿಳಿಸುತ್ತಿಲ್ಲ.

ಇವರು ಮಾನಸಿಕ ವ್ಯಾಧಿಯಿಂದಾಗಿ ಈ ಸ್ಥಿತಿಯಲ್ಲಿ ತಿರುಗಾಡುತ್ತಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮಹಿಳೆಯು ಹೊರ ರಾಜ್ಯದವಳಾಗಿದ್ದು ವಿಳಾಸ ಪತ್ತೆಯಾಗಿಲ್ಲ. ಸಂಬಂಧಪಟ್ಟವರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಮಹಿಳೆಗೆ ಚಿಕಿತ್ಸೆಯ ನಂತರ ಪುನರ್ವಸತಿ ಕೇಂದ್ರದ ಅಗತ್ಯವಿದ್ದು ಸಂಬಂಧಪಟ್ಟ ಇಲಾಖೆ ಪುನರ್ವಸತಿ ಕಲ್ಪಿಸಬೇಕಾಗಿ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

16/03/2022 05:07 pm

Cinque Terre

9.26 K

Cinque Terre

1

ಸಂಬಂಧಿತ ಸುದ್ದಿ