ಮೂಡುಬಿದಿರೆ: ನಮ್ಮ ಮೂಡುಬಿದಿರೆಯ ಒಡೆಯ ಹನುಮಂತ ದೇವರ ಕೃಪೆಯಿಂದಾಗಿ ನಾನು ಉಕ್ರೇನ್ನಿಂದ ಹುಟ್ಟೂರಿಗೆ ಸುರಕ್ಷಿತವಾಗಿ ತಲುಪಲು ಸಾಧ್ಯವಾಯಿತು. ಸರಕಾರವ ಆದರೆ ನಮ್ಮ ಶೈಕ್ಷಣಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಬಾಕಿ ಇದೆ. ಆದರೆ ಉಕ್ರೇನ್ ರಣರಂಗವಾಗಿರುವುದರಿಂದ ಶಿಕ್ಷಣಕ್ಕೆ ತೊಂದರೆಯಾಗಿದೆ. ಶೈಕ್ಷಣಿಕ ಭವಿಷ್ಯಕ್ಕಾಗಿ ನಮ್ಮ ಸರಕಾರಗಳು ನಮಗೆ ಸಹಕರಿಸಬೇಕಾಗಿದೆ ಎಂದು ಯುದ್ಧಭೂಮಿ ಉಕ್ರೇನ್ನಿಂದ ಶುಕ್ರವಾರ ಆಗಮಿಸಿ ತಮ್ಮ ಹೆತ್ತವರನ್ನು ಸೇರಿಕೊಂಡಿರುವ ಎಂಬಿಬಿಎಸ್ ಪದವೀಧರ ಮೂಡುಬಿದಿರೆಯ 23ರ ಹರೆಯದ ಪಣವ್ ಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಶನಿವಾರದಂದು ಮಾತನಾಡಿದ ಪ್ರಣವ್ ಕುಮಾರ್ ಅಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಮೇ 22ಕ್ಕೆ ಫೈನಲ್ ಎಕ್ಸಾಮ್ ನಿಗದಿಯಾಗಿತ್ತು. ಆರಂಭದಲ್ಲಿ ಯುದ್ಧದ ತೀವ್ರತೆ ಗೊತ್ತಾಗಲಿಲ್ಲ. ಉಕ್ರೇನ್ ತೊರೆಯುವುದು ಅನಿವಾರ್ಯವಾದಾಗ ದೇಶದಲ್ಲಿ ಕರ್ಫ್ಯೂ, ಆಹಾರಕ್ಕಾಗಿ ಪರದಾಟ, ಆತಂಕ ಎಲ್ಲವೂ ತೀವ್ರಗೊಂಡಿತ್ತು. ಮೊದಲು ದೂರದಲ್ಲಿ ಎಲ್ಲೋ ಸ್ಪೋಟದ ಸದ್ದು , ದಿನ ಕಳೆದಂತೆ ಆಸುಪಾಸಿನಲ್ಲಿ ಕೇಳಿ ಬಂದಾಗ ಆತಂಕವಾಗಿತ್ತು.
ಇನ್ನೂ 600 ಮಂದಿ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಅಲ್ಲಿನ ಶಿಕ್ಷಣ ಚೆನ್ನಾಗಿದೆ. ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ನೋಡುತ್ತಾರೆ. ಯುದ್ಧ ಮುಗಿದು ಅಲ್ಲಿಯೇ ಹೋಗುವ ಹುಮ್ಮಸ್ಸಿದೆ ಎನ್ನುವ ಪ್ರಣವ್ ಕುಮಾರ್ ಶುಕ್ರವಾರ ಬೆಳಿಗ್ಗೆ ತನ್ನ ಹೆತ್ತವರನ್ನು ಸೇರಿದ್ದು ಮಗನನ್ನು ಕಂಡ ಹೆತ್ತವರಾದ ಶ್ರೀನಿವಾಸ ನಾಯಕ್ ಯಶೋಧಾ ದಂಪತಿ ನಿರಾಳವಾಗಿ ಉಸಿರುಬಿಟ್ಟಿದ್ದಾರೆ. ಹಾಗೂ ಮನೆಯಂಗಳದಲ್ಲಿಯೇ ಮಗನಿಗೆ ಆರತಿ ಎತ್ತಿ ಬರಮಾಡಿಕೊಂಡಿದ್ದಾರೆ.
Kshetra Samachara
05/03/2022 08:43 pm