ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ದಿಕ್ಕಿಲ್ಲದ ವೃದ್ಧರಿಗೆ "ಹೊಸಬೆಳಕು" ಮೂಡಿಸಿದ ಆಶ್ರಮ

ಮಣಿಪಾಲ: ದಿಕ್ಕಿಲ್ಲದ ಹಲವು ಅನಾಥರಿಗೆ ಆಶ್ರಯ ನೀಡುತ್ತಿರುವ ಮಹಾಮನೆ ,ಮಣಿಪಾಲದ "ಹೊಸಬೆಳಕು". ಇದೀಗ ದಿಕ್ಕಿಲ್ಲದ ಮತ್ತೊಬ್ಬ ವೃದ್ಧರಿಗೆ ಮಣಿಪಾಲದ ಹೊಸಬೆಳಕು ಆಶ್ರಮವು ಆಶ್ರಯ ನೀಡಿ, ವೃದ್ಧರ ಬಾಳಿನಲ್ಲಿ ಹೊಸಬೆಳಕು ಮೂಡಿಸಿದೆ. ವೃದ್ಧರು ಉಡುಪಿ ನಗರದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿರುವುದನ್ನು ಗಮನಿಸಿದ ನಗರ ಪೋಲಿಸ್ ಠಾಣೆ ಸಿಬ್ಬಂದಿ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ದೊಡ್ಡಣಗುಡ್ಡೆಯ ಡಾ. ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಿ ಹತ್ತು ದಿನಗಳ ಕಾಲ ಚಿಕಿತ್ಸೆಗೆ ಒಳಪಡಿಸಿದ್ದರು. ವೃದ್ಧರ ಸಂಬಂಧಿಕರು ಯಾರೂ ಸಂಪರ್ಕಿಸದೆ ಇರುವುದರಿಂದ ಹೊಸಬೆಳಕು ಆಶ್ರಮವು ಆಶ್ರಯ ನೀಡಿ ಮಾನವೀಯತೆ ಮೆರೆದಿದೆ.

ವೃದ್ಧರನ್ನು ಉದ್ಯಾವರ ಪಿತ್ರೋಡಿಯ ದಿ.ಬೆಂಜಮಿನ್ ಲೂಯಿಸ್ ಅವರ ಪುತ್ರ ತಿಮೋತಿ ಲೂಯಿಸ್ (84) ಎಂದು ಗುರುತಿಸಲಾಗಿದೆ.

Edited By : Manjunath H D
Kshetra Samachara

Kshetra Samachara

04/03/2022 10:13 pm

Cinque Terre

12.72 K

Cinque Terre

0

ಸಂಬಂಧಿತ ಸುದ್ದಿ