ಉದ್ಯಾವರ: ಉದ್ಯಾವರ ಪಿತ್ರೋಡಿಯ ದಿ.ಬೆಂಜಮಿನ್ ಲೂಯಿಸ್ ಎಂಬವರ ಪುತ್ರ ತಿಮೋತಿ ಲೂಯಿಸ್ (84) ದಿಕ್ಕಿಲ್ಲದೆ ರಸ್ತೆಯಲ್ಲಿ ಪಾದಚಾರಿಗಳು ನೀಡಿದ್ದನ್ನು ತಿಂದುಂಡು ಅನಾಗರಿಕವಾಗಿ ದಿನಗಳನ್ನು ಕಳೆಯುತ್ತಿದ್ದರು.
ಅಸಹಾಯಕ ಸ್ಥಿತಿಯಲ್ಲಿದ್ದ ಈ ವೃದ್ಧರನ್ನು ನಗರ ಪೋಲಿಸ್ ಠಾಣೆ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ, ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಡುಪಿ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ಅವರು ವೃದ್ಧರ ಅಸಹಾಯಕತೆ ತಿಳಿದು ರಕ್ಷಣೆಗೆ ನೆರವಾಗಿದ್ದಾರೆ.
ವೃದ್ಧರಿಗೆ ಮಾನವೀಯತೆ ನೆಲೆಯಲ್ಲಿ ಸಮಾಜದ ಸಂಘ ಸಂಸ್ಥೆಗಳು ಶಾಶ್ವತ ಪುರ್ವಸತಿ ಕಲ್ಪಿಸಲು ಮುಂದೆ ಬರಬೇಕು. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ನೆರವಿಗೆ ಬರಬೇಕೆಂದು ನಿತ್ಯಾನಂದ ಒಳಕಾಡು ಅವರು ವಿನಂತಿಸಿಕೊಂಡಿದ್ದಾರೆ.
Kshetra Samachara
22/02/2022 12:52 pm