ಉಡುಪಿ:ಮರೆವು ಖಾಯಿಲೆ ಇರುವ ನಿವೃತ್ತ ಹಿರಿಯ ಯೋಧರೊಬ್ಬರು ರಾಜಸ್ಥಾನದಿಂದ ಉಡುಪಿ ರೈಲ್ವೆ ನಿಲ್ದಾಣಕ್ಕೆ ಬಂದು ಅಸಹಾಯಕರಾಗಿದ್ದರು. ಅವರನ್ನು ಸಮಾಜಸೇವಕ ವಿಶು ಶೆಟ್ಟಿಯವರು ಕಾರ್ಕಳದ ಬೈಲೂರಿನ ಗಂಗೋತ್ರಿ ಆಶ್ರಮಕ್ಕೆ ದಾಖಲಿಸಿದ್ದಾರೆ.
ಯೋಧರ ಹೆಸರು ಜಗದೀಶ್(65)ಎಂದು ತಿಳಿದುಬಂದಿದೆ. ಮರೆವು ಕಾಯಿಲೆಯಿಂದಾಗಿ ತಾನು ಎಲ್ಲಿಗೆ ಬಂದಿದ್ದೇನೆ ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲ.ಕೊನೆಗೆ ರೈಲ್ವೆ ಪೊಲೀಸರು ರಾಜಸ್ಥಾನದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಂಬಂಧಿಕರನ್ನು ಪತ್ತೆ ಮಾಡುವ ಕೆಲಸವನ್ನು ರೈಲ್ವೆ ಪೊಲೀಸರು ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯದಲ್ಲಿ ರೈಲ್ವೆ ಪೊಲೀಸರು ಹಾಗೂ ಹಿರಿಯ ನಾಗರಿಕ ಸಹಾಯವಾಣಿಯ ಪೂರ್ಣಿಮಾ ಹಾಗೂ ರೋಷನ್ ಸಹಕರಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇವರನ್ನು ಕುಟುಂಬಿಕರೊಂದಿಗೆ ಸೇರಿಸುವಲ್ಲಿ ಸಹಕರಿಸಬೇಕಾಗಿ ವಿಶು ಶೆಟ್ಟಿಯವರು ಕೋರಿದ್ದಾರೆ.
Kshetra Samachara
17/02/2022 07:34 pm