ಉಡುಪಿ: ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಅಪರಿಚಿತ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು. ಮೃತರ ಕಳೇಬರಗಳನ್ನು ವಾರಸುದಾರರ ಬರುವಿಕೆಗಾಗಿ ಆಸ್ಪತ್ರೆಯ ಶೀತಲೀಕೃತ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ಮೃತರ ವಾರಸುದಾರರು ಬಾರದೇ ಇರುವುದರಿಂದ ಸಾಮಾಜಿಕ ಕಾರ್ಯಕರ್ತರ ಸಹಾಯದೊಂದಿಗೆ ಮೂರು ಶವಗಳ ಅಂತ್ಯಸಂಸ್ಕಾರ ಉಡುಪಿಯಲ್ಲಿ ನಡೆಯಿತು.
ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಈ ಮಾನವೀಯ ಕಾರ್ಯದಲ್ಲಿ ಭಾಗಿಯಾದರು. ಉಳಿದಂತೆ ನಗರಸಭೆ, ನಗರ ಪೊಲೀಸ್ ಠಾಣೆ ಈ ಕಾರ್ಯದಲ್ಲಿ ಕೈಜೋಡಿಸಿತು. ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಮಾಜಸೇವಕ ಈಶ್ವರ್ ಮಲ್ಪೆ, ರಾಘವೇಂದ್ರ ಬಿ.ಕೆ ಮಲ್ಪೆ, ಪ್ರದೀಪ್ ಅಜ್ಜರಕಾಡು, ವಿಷ್ಣು ಪ್ಲವರ್ ಸ್ಟಾಲ್, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ, ಅಂಬಿಕಾ ವಕ್ವಾಡಿ ಸಹಕರಿಸಿದರು.
Kshetra Samachara
14/02/2022 06:21 pm