ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ಗ್ರಾಮದ ಮಾಸ್ತಿ ನಗರದಲ್ಲಿ ವಾಸವಾಗಿರುವ ಬಡಕುಟುಂಬದ ಅಂಗವಿಕಲೆ ಭಾರತಿ ಶಿವಾನಂದ ಅವರ ಕಷ್ಟಕ್ಕೆ ದಾನಿಗಳು ಮಿಡಿದಿದ್ದಾರೆ.ಇವರ ಹಳೆಯ ಗುಡಿಸಲಿನಂತಹ ಮನೆಯನ್ನು ಕೆಡವಿ ವಾಸ್ತವ್ಯದ ಹೊಸ ಮನೆ ನಿರ್ಮಿಸಿಕೊಡಲು ದಾನಿಗಳು ಮುಂದೆ ಬಂದಿದ್ದಾರೆ.ಭಾರತಿ ಶಿವಾನಂದ ಅವರಿಗೆ ಗಣೇಶ ಗಾಣಿಗ ಎಂಬ ದಾನಿ ಉಚಿತವಾಗಿ ಮನೆ ನಿರ್ಮಿಸಿಕೊಡಲು ಉದ್ದೇಶಿಸಿದ್ದು ಇಂದು ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ ಬಂಡಿಮಠ ಅಭಿಷೇಕ್ ಅಡಿಗರ ನೇತೃತ್ವದಲ್ಲಿ ಜರಗಿದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನಿಲ್ ಬೈಕಾಡಿ, ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ರಮಾನಂದ ಶೆಟ್ಟಿ, ಮಾಜಿ ಅಧ್ಯಕ್ಷರಾದ ಮಂಜುನಾಥ ಪೂಜಾರಿ ,ಗುತ್ತಿಗೆದಾರರಾದ ಸಂತೋಷ್ ಪೂಜಾರಿ ಮಾಸ್ತಿ ನಗರ ಇವರು ಉಪಸ್ಥಿತರಿದ್ದರು.
ಹನೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಗಾಣಿಗ ಉಸ್ತುವಾರಿಯಲ್ಲಿ ಕಾರ್ಯಕ್ರಮ ಜರಗಿತು. ಸಂತೋಷ್ ಪೂಜಾರಿ ನವಗ್ರಾಮ ಅತಿಥಿಗಳಿಗೆ ಪುಷ್ಪ ನೀಡುವುದರ ಮೂಲಕ ಸ್ವಾಗತಿಸಿದರು. ಭಾರತಿ ಶಿವಾನಂದ ದಂಪತಿ ಸಿಹಿತಿಂಡಿ ವಿತರಿಸುವುದರ ಮೂಲಕ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
Kshetra Samachara
30/01/2022 04:54 pm