ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಪದ್ಮಶ್ರೀ' ಅಮೈ ಮಹಾಲಿಂಗ ನಾಯ್ಕರ ಮನೆಗೆ ಪೇಜಾವರ ಶ್ರೀಗಳ ಭೇಟಿ

ಉಡುಪಿ: ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಹಸಿ ರೈತ ಅಮೈ ಮಹಾಲಿಂಗ ನಾಯ್ಕರ ತೋಟಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಇವತ್ತು ಭೇಟಿ ನೀಡಿದರು.

ಶ್ರೀಗಳ ದಿಢೀರ್ ಭೇಟಿಯಿಂದ ಅಚ್ಚರಿಗೊಂಡ ನಾಯ್ಕರು, ಅತೀವ ಸಂತಸಪಟ್ಟು ಭಕ್ತಿ ಗೌರವದಿಂದ ಬರಮಾಡಿಕೊಂಡರು.

ನಾಯ್ಕರ ತೋಟಕ್ಕೆ ತೆರಳಿದ ಶ್ರೀಗಳು ಭಗೀರಥ ಪ್ರಯತ್ನದಿಂದ ಕೊರೆದ ಸುರಂಗದ ಒಳಹೊಕ್ಕು ವಿಸ್ಮಯಗೊಂಡರು. ಸುರಂಗ ಕೊರೆದು 'ಗಂಗೆ'ಯನ್ನು ಪಡೆದ ಯಶೋಗಾಥೆಯನ್ನು ನಾಯ್ಕರಿಂದಲೇ ಕೇಳಿ, ತುಂಬಿರುವ ಸಮೃದ್ದ ಜಲ ಸಿರಿಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತು ನಾಯ್ಕರ ಸಾರ್ಥಕ ಪರಿಶ್ರಮದ ಫಲಕ್ಕೆ ಸಾಕ್ಷಿ ಹೇಳುತ್ತಿರುವ ತೆಂಗು, ಕಂಗು, ಬಾಳೆ, ಮಾವು, ಹಲಸು ಮೊದಲಾದವುಗಳನ್ನು ವೀಕ್ಷಿಸಿದ ಬಳಿಕ ನಾಯ್ಕರ ಮನೆಗೆ ಆಗಮಿಸಿದ ಶ್ರೀಗಳಿಗೆ ನಾಯ್ಕರು ಮತ್ತವರ ಮನೆ ಮಂದಿ ಗೌರವಾರ್ಪಣೆಗೈದರು.

ನಾಯ್ಕರ ಕೃಷಿಯ ಅವಿರತ ಸಾಧನೆಯನ್ನು ಮನಸಾರೆ ಬಣ್ಣಿಸಿದ ಶ್ರೀಗಳು, ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅತ್ಯಂತ ಅಭಿನಂದನೀಯ ಎಂದರು. ನಾಯ್ಕರಿಗೆ ಶಾಲು, ಶ್ರೀಕೃಷ್ಣನ ವಿಗ್ರಹವಿರುವ ಕಾಷ್ಠ ಮಂಟಪದ ಸ್ಮರಣಿಕೆ, ನಗದು, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸ್ಥಳೀಯ ರಾದ ಜನಾರ್ದನ ಭಟ್ , ಪಂಚಾಯತ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

29/01/2022 01:13 pm

Cinque Terre

14.6 K

Cinque Terre

0

ಸಂಬಂಧಿತ ಸುದ್ದಿ