ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೀದಿಯಲ್ಲಿ ಒಂಟಿಯಾಗಿದ್ದ ನಾಲ್ಕು ವರ್ಷದ ಬಾಲಕನಿಗೆ ಆಶ್ರಯ!

ಉಡುಪಿ :ನಿಟ್ಟೂರಿನ ರಾಷ್ಟೀಯ ಹೆದ್ದಾರಿ ಸಮೀಪ 4ರ ಹರೆಯದ ಬಾಲಕ ದುಃಖಿಸುತ್ತಿರುವುದನ್ನು ಕಂಡ ಸಮಾಜಸೇವಕ ವಿಶು ಶೆಟ್ಟಿ ಸ್ಥಳೀಯರ ಜೊತೆ ಸೇರಿ ರಕ್ಷಿಸಿ "ಕೃಷ್ಣಾನುಗ್ರಹ" ಕ್ಕೆ ದಾಖಲಿಸಿದ ಘಟನೆ ರಾತ್ರಿ ನಡೆದಿದೆ.

ಬಾಲಕನ ತಾಯಿ ಈ ಹಿಂದೆಯೇ ಗಂಡ ಹಾಗೂ ಮಗುವನ್ನು ತೊರೆದು ಹೋಗಿದ್ದಾಳೆ. ಬಾಲಕನ ಅಪ್ಪ ಮದ್ಯ ವ್ಯಸನಿಯಾಗಿದ್ದಾನೆ. ಬಾಲಕ ಅಪ್ಪನನ್ನು ಹಿಂಬಾಲಿಸಿಕೊಂಡು ಊರೆಲ್ಲ ಸುತ್ತುತ್ತ ದುರಂತ ಜೀವನ ಸಾಗಿಸುತ್ತಿದ್ದ.

ಇದೀಗ ಬಾಲಕನ ಭವಿಷ್ಯ ಹಾಳಾಗಬಾರದೆಂಬ ಉದ್ದೇಶದಿಂದ ಸಮಾಜಸೇವಕ ವಿಶು ಶೆಟ್ಟಿ ಸಂಬಂಧಪಟ್ಟ ಮಕ್ಕಳ ರಕ್ಷಣಾ ಇಲಾಖೆಗೆ ಎಲ್ಲಾ ವಿವರಗಳನ್ನು ನೀಡಿ ಕೃಷ್ಣಾನುಗ್ರಹಕ್ಕೆ ದಾಖಲಿಸಿದ್ದಾರೆ. ಪ್ರಕಾಶ್ ಪೂಜಾರಿ ಉಪ್ಪೂರು ಅಜಿತ್ ಕಪ್ಪೆಟ್ಟು ಹಾಗೂ ಸಾಯಿ ಪ್ರಸಾದ್ ನೇಜಾರು ಈ ಮಾನವೀಯ ಕೆಲಸಕ್ಕೆ ಸಹಕರಿಸಿದರು.

Edited By : Nagaraj Tulugeri
Kshetra Samachara

Kshetra Samachara

27/01/2022 03:11 pm

Cinque Terre

4.58 K

Cinque Terre

0

ಸಂಬಂಧಿತ ಸುದ್ದಿ