ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ದಿಕ್ಕಿಲ್ಲದ ಈ ಮೂಕ ಮಹಿಳೆಗೆ ಸಹಾಯ ಮಾಡುವಿರಾ?

ಕಾಪು: ಕಾಪು ಠಾಣೆ ವ್ಯಾಪ್ತಿಯ ಇನ್ನಂಜೆಯಲ್ಲಿ ತನ್ನವರು ಯಾರೂ ಇಲ್ಲದೆ ಅಸಹಾಯಕಳಾಗಿ ರೋಧಿಸುತ್ತಿದ್ದ ಮೂಕ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ನಿಟ್ಟೂರಿನ ಸಖಿ ಸೆಂಟರ್ ಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಮಹಿಳೆ ನಳಿನಿ ದೇವಾಡಿಗ (45) ಎಂಬವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ ತೊರೆದಿದ್ದಾರೆ. ಈ ಮಹಿಳೆಯ ತಂದೆ, ತಾಯಿ, ಸಹೋದರರೂ ಮೃತರಾಗಿದ್ದಾರೆ. ಹೀಗಾಗಿ ಅಸಹಾಯಕತೆಯಿಂದ ರಾತ್ರಿ ಹೊತ್ತು ರೋಧಿಸುತ್ತಿದ್ದಾಗ ಸ್ಥಳೀಯ ಮಹಿಳೆಯೊಬ್ಬರು ಉಪಚರಿಸಿ ಆಹಾರ ನೀಡಿದ್ದರು. ಈ ಬಗ್ಗೆ ವಿಷಯ ತಿಳಿದ ಸಮಾಜಸೇವಕ ವಿಶು ಶೆಟ್ಟಿ ಮಹಿಳೆಯನ್ನು ಇಲಾಖೆಯ ಸಿಬ್ಬಂದಿ ಪೂರ್ಣಿಮಾ ಸಹಕಾರದಿಂದ ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿದ್ದಾರೆ.

ಬಾಯಿ ಬಾರದ ಅಸಹಾಯಕ ಮಹಿಳೆಗೆ ಸಂಬಂಧಪಟ್ಟವರು ಅಥವಾ ಸಮಾಜ ಸಹಕರಿಸಿ ಮಹಿಳೆಯ ನೋವಿಗೆ ಸ್ಪಂದಿಸಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.

Edited By : Nagesh Gaonkar
PublicNext

PublicNext

25/01/2022 06:02 pm

Cinque Terre

36 K

Cinque Terre

2

ಸಂಬಂಧಿತ ಸುದ್ದಿ