ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬದಿಯಡ್ಕ:ಕೊಡುಗೈ ದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ನಿಧನ

ಬದಿಯಡ್ಕ: ಕೊಡುಗೈದಾನಿ ಸಾಯಿರಾಮ್ ಗೋಪಾಲಕೃಷ್ಣ ಭಟ್ (85) ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಕಾಸರಗೋಡು ಜಿಲ್ಲೆಯ ಬದಿಯಡ್ಡ ಕಿಳಿಂಗಾರು ಗ್ರಾಮದಲ್ಲಿ ಕೃಷ್ಣ ಭಟ್ ಮತ್ತು ಸುಬ್ಬಮ್ಮ ದಂಪತಿಯ ಕಿರಿಯ ಪುತ್ರನಾಗಿ1937ರ ಜುಲೈ 17ರಂದು ಜನಿಸಿದ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಜನಮಾನಸದಲ್ಲಿ ಕೊಡುಗೈ ದಾನಿ ಎಂದೇ ಗುರುತಿಸಲ್ಪಟ್ಟಿದ್ದರು. ಪುಟ್ಟಪರ್ತಿ ಭಗವಾನ್ ಶ್ರೀ ಸತ್ಯ ಸಾಯಿಬಾಬಾರ ಪರಮ ಭಕ್ತರಾಗಿದ್ದ ಗೋಪಾಲಕೃಷ್ಣ ಭಟ್ ''ಸಾಯಿರಾಂ ಭಟ್'' ಎಂದೇ ಪ್ರಸಿದ್ಧರಾಗಿದ್ದರು.

ಮೃತರು ಪತ್ನಿ, ಬದಿಯಡ್ಡ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎನ್. ಕೃಷ್ಣ ಭಟ್, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

ಗೋಪಾಲಕೃಷ್ಣ ಭಟ್ ಸರಳ ವ್ಯಕ್ತಿಯಾಗಿದ್ದು, ತಾವು ಉಳಿಸಿದ ಹಣದಿಂದ ಸಾವಿರಾರು ಜನರಿಗೆ ಸಹಾಯ ಮಾಡಿ ಪ್ರಸಿದ್ಧರಾಗಿದ್ದರು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದಭಾವ ತೋರದೆ 50ಸೆನ್ಸ್ ಕಡಿಮೆ ಸ್ಥಳವಿರುವ ಮತ್ತು ಶಾಶ್ವತ ಉದ್ಯೋಗವಿರದ 265 ಬಡವರಿಗೆ ಮನೆ ನಿರ್ಮಿಸಿಕೊಟ್ಟಿದ್ದರು.

ಸುಮಾರು ವರ್ಷಗಳ ಹಿಂದೆ ಪತ್ನಿ ಸಮೇತರಾಗಿ ಕಾಶಿಯಾತ್ರೆ ಕೈಗೊಳ್ಳಲು ಮುಂದಾಗಿದ್ದರು. ಆ ಸಮಯ ದಲ್ಲಿ ಸುರಿದ ಭಾರೀ ಮಳೆಗೆ ಮನೆ ಕಳೆದುಕೊಂಡ ಸಮೀಪದ ವ್ಯಕ್ತಿಯೋರ್ವನ ದಯನೀಯ ಸ್ಥಿತಿ ಕಂಡು ಮರುಗಿದ ಅವರು ಕಾಶಿಯಾತ್ರೆಯನ್ನೇ ರದ್ದುಗೊಳಿಸಿ, ಆ ದುಡ್ಡಿನಲ್ಲಿ ಉಚಿತವಾಗಿ ಮನೆ ಕಟ್ಟಿಕೊಟ್ಟರು. ಅಂದಿನಿಂದಇವರು ಜನಜೀವ ಪ್ರಾರಂಭಿಸಿದ್ದರು.

10 ಜನರಿಗೆ ಆಟೊರಿಕ್ಷಾ ಹಾಗೂ ಸುಮಾರು 300 ಜನರಿಗೆ ಉಚಿತ ಹೊಲಿಗೆ ಯಂತ್ರ ನೀಡಿ ಸ್ವಉದ್ಯೋಗ ಪ್ರೋತ್ಸಾಹ ಕೂಡ ಮಾಡಿದ್ದರು.

1996ರಿಂದ ಆರಂಭಿಸಿ ಕೊರೋನ ಆರಂಭಿಕ ಹಂತದವರೆಗೆ ಪ್ರತಿ ಶನಿವಾರ ಉಚಿತ ವೈದ್ಯಕೀಯ ಶಿಬಿರಗಳನ್ನು ತನ್ನ ಮನೆಯಲ್ಲಿ ಆಯೋಜಿಸಿ ಲಕ್ಷಾಂತರ ಬಡ ರೋಗಿಗಳಿಗೆ ಸಹಾಯ ಮಾಡಿದ್ದಾರೆ.

ಕಡು ಬಡವರಿಗೆ ಉಚಿತವಾಗಿ ಹಾಗೂ ಸಾರ್ವಜನಿ ಕರಿಗೆ ಅತೀ ಕಡಿಮೆ ದರದಲ್ಲಿ ಶುಭ ಸಮಾರಂಭ ನಡೆಸಲು ಅನುವಾಗುವಂತಹ, ಸಕಲ ಸೌಲಭ್ಯಗಳನ್ನು ಹೊಂದಿದ ಸಾಯಿ ಮಂದಿರ ಎಂಬ ಸಮುದಾಯ ಭವನವನ್ನು ತನ್ನ ಮನೆ ಸಮೀಪ 2001ರಲ್ಲಿ ನಿರ್ಮಿಸಿದ್ದರು. ಹಲವು ಬಾರಿ ಸಾಮೂಹಿಕ ವಿವಾಹ ಕಾರ್ಯ ಕ್ರಮಗಳನ್ನು ಏರ್ಪಡಿಸಿ, ಸುಮಾರು 45 ಜೋಡಿಗಳ ವಿವಾಹ ನೆರವೇರಿಸಿದ್ದರು.

ಕೇರಳ ಮತ್ತು ಕರ್ನಾಟಕದ ಹಲವು ಸಚಿವರು, ಸಂಪದರು ಹಾಗೂ ಶಾಸಕರು ಇವರು ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮಗಳಿಗೆ ಆಗಮಿಸಿ ಅವರ ಆಶೀರ್ವಾದ ಪಡೆದುಕೊಂಡಿದ್ದರು. ಲಯನ್ಸ್ ಕ್ಲಬ್, ಕಲ್ಲೂರ ಪ್ರತಿಷ್ಠಾನ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿತ್ತು.

ಕನಸಾಗಿಯೇ ಉಳಿದ ಪದ್ಮಶ್ರೀ ಸಾಯಿರಾ ಭಟ್‌ರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಅಭಿಲಾಷೆ ಜನಸಾಮಾನ್ಯರಾಗಿತ್ತು. ಆದರೆ ಈ ಆಸೆ ಈಡೇರಿಲ್ಲ, ಈ ಹಿಂದೆ ಕೇರಳ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ಪ್ರಶಸ್ತಿ ಮಾತ್ರ ಕನಸಾಗಿಯೇ ಉಳಿದುಕೊಂಡಿದೆ.

Edited By : Nirmala Aralikatti
Kshetra Samachara

Kshetra Samachara

23/01/2022 03:32 pm

Cinque Terre

3.86 K

Cinque Terre

1

ಸಂಬಂಧಿತ ಸುದ್ದಿ