ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಳಲಿ: 'ಯೋಧರಿಗಾಗಿ ನನ್ನ ಕಾಣಿಕೆ'; ಶಾಲೆಯಲ್ಲಿ ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆ

ಬಂಟ್ವಾಳ: 'ಯೋಧರಿಗಾಗಿ ನನ್ನ ಕಾಣಿಕೆ...' ಈ ಆಶಯವನ್ನು ಇಟ್ಟುಕೊಂಡು ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿರುವ ಸರ್ಕಾರಿ ಹೈಸ್ಕೂಲಿನಲ್ಲಿ ಒಂದು ಬಾಕ್ಸ್ ಇಡಲಾಗಿದೆ.

ಈ ಬಾಕ್ಸ್ ಗೆ ಮಕ್ಕಳು ತಮ್ಮ ಕೈಲಾದಷ್ಟು ಹಣವನ್ನು ಹಾಕುತ್ತಾರೆ. ಇದು 'ಸೈನಿಕ ಕಲ್ಯಾಣ ನಿಧಿ'ಗೆ ಬಳಕೆಯಾಗುತ್ತದೆ.

* ಏನಿದರ ಉದ್ದೇಶ?:

ಸೈನಿಕರ ತ್ಯಾಗ- ಬಲಿದಾನ, ಶೌರ್ಯದ ಅರಿವು, ದೇಶಪ್ರೇಮದ ಜಾಗೃತಿ ಇದರ ಮುಖ್ಯ ಉದ್ದೇಶ ಎನ್ನುತ್ತಾರೆ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ಭಟ್.

ದೇಶದ ಸುರಕ್ಷತೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟು ಹೋರಾಡುವ ಸೈನಿಕರ ಸೇವೆ- ಬದ್ಧತೆಗೆ ಗೌರವ ನೀಡುವ ವಿನೂತನ ಯೋಜನೆಯಿದು. ಇಲ್ಲಿ ಯೋಧರಿಗಾಗಿ 'ನನ್ನದು ಕಾಣಿಕೆ' ಎನ್ನುವ ಹೆಸರಿನಲ್ಲಿ ಹುಂಡಿಯೊಂದನ್ನು ಇರಿಸಲಾಗಿದ್ದು, ಮಕ್ಕಳು ತಮ್ಮಿಷ್ಟದಂತೆ ಹಣವನ್ನು ಹಾಕಬಹುದಾಗಿದೆ.

ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಸಲಹೆಯಂತೆ ಈ ಯೋಜನೆ ಜಾರಿ ಮಾಡಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

Edited By : Shivu K
Kshetra Samachara

Kshetra Samachara

14/01/2022 10:27 am

Cinque Terre

20.68 K

Cinque Terre

1

ಸಂಬಂಧಿತ ಸುದ್ದಿ