ಕಾರ್ಕಳ: ಇತ್ತೀಚೆಗೆ ಕಾರ್ಕಳ ಕರಿಯಕಲ್ಲಿನ ಯಶೋಧಾ ಆಚಾರ್ಯ ಅವರ ಮನೆಯಲ್ಲಿ ಗೋಕಳ್ಳತನ ನಡೆದಿತ್ತು.ಈ ಹಿನ್ನೆಲೆಯಲ್ಲಿ ಇಂದು ಕಾರ್ಕಳ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ಪ್ರಮುಖರು ಯಶೋಧಾ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಗೋ ದಾನ ಮಾಡುವ ಮೂಲಕ ಕುಟುಂಬದ ಜೀವನಾಧಾರಕ್ಕೆ ಸಹಾಯ ಹಸ್ತ ನೀಡುವುದರ ಜೊತೆಗೆ ಸಾಂತ್ವನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ಜಗದೀಶ್ ಪೂಜಾರಿ ಸಾಣೂರು, ಬಜರಂಗದಳ ಸಂಚಾಲಕ ಚೇತನ್ ಪೇರಲ್ಕೆ, ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಸುಧೀರ್ ನಿಟ್ಟೆ , ಪ್ರಮುಖರಾದ ಮನೋಜ್ ಕರಿಯಕಲ್ ಮತ್ತು ಗೋರಕ್ಷಕ್ ಪ್ರಮುಖ್ ಪ್ರಸಾದ್ ನಿಟ್ಟೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
11/01/2022 08:05 pm