ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಪ್ರೌಢ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಪ್ರಾಮಾಣಿಕತೆ ಮೆರೆದಿದ್ದಾರೆ. ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ಸಿಕ್ಕಿದ ಹತ್ತು ಸಾವಿರ ರುಪಾಯಿ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಿಂದಿರುಗಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿ ಜೀವನದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ.
ಮುಖ್ಯೋಪಾಧ್ಯಯರು ವಾಟ್ಸಪ್ ಮೂಲಕ ಸಾರ್ವಜನಿಕ ಸಂದೇಶ ಹರಿಬಿಟ್ಟಿದ್ದು ,ಈ ದುಡ್ಡು ಅದೇ ಊರಿನ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಸುರೇಖಾ ಅವರದ್ದು ಎಂಬುದು ಗೊತ್ತಾಗಿದೆ. ಮುಖ್ಯೋಪಾಧ್ಯಾಯರು ಸುರೇಖಾ ಅವರಿಂದ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇಂದು ಬೆಳಗ್ಗೆ ಶಾಲೆಯ ಅಸಂಬ್ಲಿ ನಡೆಯುತ್ತಿರುವ ಸಂದರ್ಭ ಕುಮಾರಿ ಶ್ರಾವ್ಯಾ, ಐಶ್ವರ್ಯಾ ಜೆ, ಪ್ರಸ್ತುತಿ ಮತ್ತು ವೈಷ್ಣವಿ ಹಣವನ್ನು ಕಳೆದುಕೊಂಡಿದ್ದ ಸುಲೇಖಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸುಲೇಖಾ ಶಾಲೆಯ ಎಲ್ಲ ವಿದ್ಯಾರ್ಥಿಗಳಗೆ ಸಿಹಿ ವಿತರಿಸಿ ಧನ್ಯವಾದ ಸಮರ್ಪಿಸಿದರು. ಮಕ್ಕಳ ಪ್ರಾಮಾಣಿಕತೆ ಎಲ್ಲರಿಗೂ ಮಾದರಿ. ಈ ಘಟನೆ ನಮ್ಮ ಶಾಲೆಗೆ ಹೆಗ್ಗಳಿಕೆಗೆ ಕಾರಣವಾಗಿದೆ. ಸರಕಾರಿ ಶಾಲೆಯ ಮಕ್ಕಳಲ್ಲಿರುವ ನಿಯತ್ತನ್ನು ಮುಖ್ಯೋಪಾಧ್ಯಾಯರು , ಶಿಕ್ಷಕರು ಕೊಂಡಾಡಿದರು.ಮಾತ್ರವಲ್ಲ ,ವಿದ್ಯಾರ್ಥಿನಿಯರ ಪ್ರಾಮಾಣಿಕತೆ ಪ್ರಶಂಸೆಗೆ ಪಾತ್ರವಾಯಿತು.
Kshetra Samachara
06/01/2022 06:17 pm