ಉಪ್ಪೂರು: ನಗರದ ಗ್ರಾಮಾಂತರ ಪ್ರದೇಶವೊಂದರಲ್ಲಿ ಬುದ್ದಿಮಾಂದ್ಯ ಯುವಕ ಅಸಹಾಯಕ ಪರಿಸ್ಥಿತಿಯಲ್ಲಿ ನೊಂದು ಗೋಳಾಡುತ್ತಿದ್ದ ವಿಷಯ ತಿಳಿದ ವಿಶು ಶೆಟ್ಟಿ ಆತನನ್ನು ರಕ್ಷಿಸಿ ಉಪ್ಪೂರಿನ ಸ್ಪಂದನ ಭಿನ್ನ ಸಾಮರ್ಥ್ಯ ವಸತಿ ಕೇಂದ್ರಕ್ಕೆ ದಾಖಲಿಸಿದ ಘಟನೆ ರಾತ್ರಿ ನಡೆದಿದೆ.
ಯುವಕನು ತನ್ನ ಹೆಸರು ಶಿವ(ಸುಮಾರು 20ವರ್ಷ) ಎಂದಷ್ಟೇ ತಿಳಿಸಿದ್ದು, ಬೇರೇನೂ ವಿವರ ನೀಡುತ್ತಿಲ್ಲ. ಬರಿಕಾಲಲ್ಲಿ ನಡೆದು ನಡೆದು ಕಾಲಿನಲ್ಲಿ ಗಾಯಗಳಾಗಿದ್ದು, ಮೈಯೆಲ್ಲಾ ತುರಿ ಕಜ್ಜಿಗಳಾಗಿವೆ.ಈತನಿಗೆ ತುರ್ತು ಚಿಕಿತ್ಸೆ ನೀಡಿ ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಂಬಂಧಿಕರು ಯಾರಾದರೂ ಇದ್ದಲ್ಲಿ ಸ್ಪಂದನ ಕೇಂದ್ರ(9743580116)ವನ್ನು ಸಂಪರ್ಕಿಸಲು ಕೋರಲಾಗಿದೆ. ರಕ್ಷಣಾ ಕಾರ್ಯದಲ್ಲಿ ಮಂಜುನಾಥ್ ಕೋಟೇಶ್ವರ ಸಹಕರಿಸಿದ್ದಾರೆ. ಉದ್ಯಾವರದ ನಿವೃತ್ತ ಮಹಿಳಾ ಬ್ಯಾಂಕ್ ಅಧಿಕಾರಿ ಸ್ಪಂದನ ಕೇಂದ್ರಕ್ಕೆ ರೂ.5000 ಆರ್ಥಿಕ ಸಹಾಯ ನೀಡಿ ಸಹಕರಿಸಿದರು.
Kshetra Samachara
06/01/2022 04:05 pm