ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿಗೊಂದು ಹೆಸರು ಇದು ಝಿಪ್ಪಿ 'ಗ್ರಫಿ', ಇದು ಶ್ವಾನ ಜಗತ್ತಿನೊಳಗಣ ಅನುಭವದ ಕಥನ

ಉಜಿರೆ:ಝಿಪ್ಪಿ ನಮ್ಮ ಕಥೆಯಾ ಕಥಾ ನಾಯಕಿ, ಬಿರಿದ ಹಂತಿಯ ಉಂಡೆಯಂತೆ ಕಾಣುವ ಇವಳು ಸದಾ ಚುರುಕು,ತುಂಬಾ ಮುದ್ದು,ತಾಳ್ಮೆಯ ಪ್ರತಿರೂಪ,ಪ್ರೀತಿಯ ದೇವತೆಯಂತಿರುವ ಇವಳು ಎಲ್ಲರ ಅಚ್ಚುಮೆಚ್ಚಿನ ಗೆಳತಿ ಕೂಡ ಹೌದು.ಇಷ್ಟೆಲ್ಲಾ ಇವಳ ಬಗ್ಗೆ ಯಾಕಿಷ್ಟು ಪೀಠಿಕೆ ಅಂತಿರಾ ವಿಷಯ ಇದೆ ತಿಳಿಸ್ತೀವಿ ಕೇಳಿ

ಪ್ರೀತಿಗೊಂದು ಹೆಸರು ಇದು ಝಿಪ್ಪಿ ಗ್ರಫಿ ಸದ್ಯ ಪುಸ್ತಕ ಲೋಕದಲ್ಲಿ ಸದ್ದು ಮಾಡುತ್ತಿರುವ ವಿಶೇಷ ಪುಸ್ತಕ.ಏನು ಶ್ವಾನದ ಹೆಸರಲ್ಲೊಂದು ಪುಸ್ತಕವೇ ಅಂದುಕೊಂಡ್ರ ಹೌದು ಇದು ಕೇವಲ ಶ್ವಾನದ ಕಥೆಯೊಳಗೊಂಡ ಪುಸ್ತಕವಲ್ಲ ಬದಲಾಗಿ ಇದು ಜೀವನಾನುಭದ ತೋರಣ,ಝಿಪ್ಪಿ ಯನ್ನು ಮಗಳಂತೆ ಸಾಕಿ ಸಲಹಿದ ಶ್ರುತಿ ಜೈನ್ ಎಂಬ ಯುವ ಲೇಖಕಿಯು ತನ್ನ ಆತ್ಮದ ಗೆಳತಿಯ ಬಗ್ಗೆ ರಸವತ್ತಾಗಿ ವಿವರಿಸಿದ ಪುಸ್ತಕವಿದು.ಲೇಖಕಿಯು ತನ್ನ ಹಾಗೂ ಶ್ವಾನ ನಡುವಣ ೬ ವರ್ಷದ ಅನುಭವಕ್ಕೆ ಅಕ್ಷರ ರೂಪ ಕೊಟ್ಟು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.ಇದರ ಬಗ್ಗೆ ಖುದ್ದು ಲೇಖಕಿ ಏನು ಹೇಳ್ತಾರೆ ಅವರ ಮಾತಲ್ಲೇ ಕೇಳೋಣ ಬನ್ನಿ.

ಕೇಳಿದ್ರಲ್ಲ ಶ್ರುತಿ ಹೇಳುವ ಹಾಗೆ ಇದು ಕಾಲ್ಪನಿಕ ಕಥೆಯಲ್ಲಾ, ಎಲ್ಲೋ ನೋಡಿದ ಕೇಳಿದ ಕಥೆಯಲ್ಲಾ ಬದಲಾಗಿ ಅವರಿಬ್ಬರೂ ಯಾರು ಇಲ್ಲದ ಪ್ರಪಂಚದಲ್ಲಿ ವಿಹರಿಸಿದ ಅನುಭವ. ಸೋಶಿಯಲ್ ಮೀಡಿಯಾದಲ್ಲಿ ಝಿಪ್ಪಿಗೆ ಸಿಕ್ಕಾಪಟ್ಟೆ ಪ್ಯಾನ್ಸ್ ಇದ್ದಾರಂತೆ ಅವಳ ಮುದ್ದಾಟ ತುಂಟಾಟ ನೋಡಿ ನನಗೂ ಒಂದು ನಾಯಿ ಬೇಕು ಅಂತ ಹಲವಾರು ಮಂದಿ ಡಿಮ್ಯಾಂಡು ಮಾಡಿ ಸಾಕೋದಿಕ್ಕೆ ಆರಂಭಿಸಿದ್ದಾರಂತೆ ಅಷ್ಟೊಂದು ಇನ್ಪ್ಲುಯೆನ್ಶಿಯಲ್ ಡಾಕ್ ಇವಳು.

ಈ ಪುಸ್ತಕ ಬರೆಯಲು ಲೇಖಕಿ ೮ ತಿಂಗಳು ತೆಗೆದುಕೊಂಡಿದ್ದಾರೆ.೧೫ ಅಧ್ಯಾಯವನ್ನು ಈ ಪುಸ್ತಕ ಹೊಂದಿದೆ. ಪುಸ್ತಕ ಬರೆಯಲೂ ಸ್ಪೂರ್ತಿ ಕಥಾ ವಸ್ತು ಝಿಪ್ಪಿಯೇ ಅನ್ನುತ್ತಾರೆ ಇವರು.ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.ಒಟ್ಟಿನಲ್ಲಿ ಹೇಳಬೇಕಂದ್ರೆ ಇದು ಸಣ್ಣ ವಯಸ್ಸಿನವರಿಂದ ಹಿಡಿದು ವಯಸ್ಕ ಶ್ವಾನ ಪ್ರೇಮಿಗಳು ಓದಲೇಬೇಕಾದಂತಹ ಪುಸ್ತಕ.ಹಾಗೂ ಕನ್ನಡ ಸಾಹಿತ್ಯ ಲೋಕದಲ್ಲಿಈ ರೀತಿಯ ಹೊಸ ಹೊಸ ಪ್ರಯೋಗ ಮತ್ತಷ್ಟು ಆಗಲಿ ಅನ್ನೋದು ನಮ್ಮ ಆಶಾಯ .ಈ ಪುಸ್ತಕದ ಬೆಲೆ ಕೇವಲ ೧೦೦ ರೂ.ಈಗಾಗ್ಲೆ ಪ್ರೀ ಬುಕ್ಕಿಂಗ್ ಕೂಡ ಆರಂಭವಾಗಿದೆ.ಪುಸ್ತಕ ಕೊಂಡು ಓದುವ ಮನಸ್ಸು ನಿಮಗೆ ಇದ್ದಲ್ಲಿ 98450 31335 ಈ ನಂಬರ್ ಗೆ ಗೂಗಲ್ ಪೇ ಮಾಡಿದ್ದಲ್ಲಿ ಮನೆಗೆ ಪುಸ್ತಕ ತಲುಪುವುದು. ಜನವರಿಯ ಮೊದಲವಾರದಲ್ಲಿ ಪುಸ್ತಕ ಬಿಡುಗಡೆಗೆ ಸಜ್ಜಾಗಿರುವ ತಂಡಕ್ಕೆ ಆಲ್ ದ ಬೆಸ್ಟ್ ಹೇಳೋಣ.

Edited By : Shivu K
PublicNext

PublicNext

26/12/2021 06:02 pm

Cinque Terre

58.63 K

Cinque Terre

0