ಮಂಗಳೂರು; ಮಂಗಳೂರಿನ ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರನ್ನು ವಿಶೇಷ ಚೇತನ ಬಾಲಕನೋರ್ವ ತಬ್ಬಿ ಹಿಡಿದು ಒಂದು ಕ್ಷಣ ಭಾವುಕ ವಾತವರಣ ಸೃಷ್ಟಿಗೆ ಕಾರಣನಾಗಿದ್ದಾನೆ.
ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಮಿಥುನ್ ರೈರನ್ನು ಕಂಡ ವಿಶೇಷ ಚೇತನ ಹುಡುಗ ಓಡಿಕೊಂಡು ಬಂದು ಮಿಥುನ್ ರೈ ಅವರನ್ನು ತುಂಬಿದ ಸಭೆಯಲ್ಲಿ ತಬ್ಬಿಕೊಂಡಿದ್ದಾನೆ.
ಇದೇ ವೇಳೆ ಭಾವುಕನಾಗಿ ನಾನು ನಿಮ್ಮನ್ನು ಭೇಟಿ ಮಾಡಲು ತುಂಬಾ ಸಮಯದಿಂದ ಕಾಯುತ್ತಿದ್ದೆ ಎಂದಾಗ ಅಲ್ಲಿದ್ದವ್ರ ಕಣ್ಣು ತುಂಬಿ ಬಂತು. ಈ ಹುಡುಗ ತುಂಬಾ ಹೊತ್ತು ಮಿಥುನ್ ರೈ ಅವರನ್ನು ಅಪ್ಪಿಕೊಂಡು ಸಂತಸವನ್ನು ವ್ಯಕ್ತಪಡಿಸುತ್ತಾ ತನ್ನ ತಾಯಿಯನ್ನು ಕರೆದು ಮಿಥುನ್ ರೈ ಅವರನ್ನು ಪರಿಚಯಿಸಿದ ಭಾವುಕ ಕ್ಷಣ ಇಂದು ಕಂಡು ಬಂತು.
Kshetra Samachara
24/12/2021 07:34 am