ಉಡುಪಿ: ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಇಬ್ಬರು ವೃದ್ಧರು, ಯಾರೂ ದಿಕ್ಕಿಲ್ಲದೇ ಹಲವು ತಿಂಗಳಿಂದ ಆಸ್ಪತ್ರೆಯಲ್ಲೇ ಕಾಲ ಕಳೆಯುತ್ತಿದ್ದರು. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯವರು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಅವರಲ್ಲಿ ಸಹಾಯ ಮಾಡುವಂತೆ ವಿನಂತಿಸಿದ್ದರು.
ಈ ಮನವಿಗೆ ಸ್ಪಂದಿಸಿದ ಜಿಲ್ಲಾ ನಾಗರಿಕ ಸಮಿತಿಯು ಈ ಇಬ್ಬರು ಹಿರಿಯರಿಗೆ ಮಣಿಪಾಲದ 'ಹೊಸ ಬೆಳಕು' ಅನಾಥಾಶ್ರಮದಲ್ಲಿ ಆಶ್ರಯ ಕಲ್ಪಿಸಿದೆ.
ಆಶ್ರಮದ ಸಂಚಾಲಕರಾದ ತನುಲಾ ತರುಣ್, ವಿನಯಚಂದ್ರ ಸಾಸ್ತಾನ ಅವರು ಹಿರಿಯ ಜೀವಗಳಿಗೆ ಆಶ್ರಯ ಒದಗಿಸಿ, ಮಾನವಿಯತೆ ಮೆರೆದಿದ್ದಾರೆ.
Kshetra Samachara
16/11/2021 05:54 pm