ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಜೀರು ಗೋವನಿತಾಶ್ರಯ ಗೋಶಾಲೆಯ "ಗೋವಿಗಾಗಿ ಮೇವು" ಸಮರ್ಪಣೆಗೆ ಹೊರೆಕಾಣಿಕೆ

ಮಂಗಳೂರು: ವಿಶ್ವ ಹಿಂದೂ ಪರಿಷತ್ತಿನ‌ ಸೇವಾ ಪ್ರಕಲ್ಪದಿಂದ ನಗರದ ಕೊಣಾಜೆ ಸಮೀಪದ ಪಜೀರು ಗೋವನಿತಾಶ್ರಯ ಗೋಶಾಲೆಯ "ಗೋವಿಗಾಗಿ ಮೇವು" ಸಮರ್ಪಣೆಗಾಗಿ ಹೊರೆಕಾಣಿಕೆ ಕಾರ್ಯಕ್ರಮಕ್ಕೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಚಾಲನೆ ದೊರಕಿತು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ‌ಶ್ರೀ 1008 ರಾಜಯೋಗಿ ನಿರ್ಮಲನಾಥಜೀ ಮಹಾರಾಜ್ ಮತ್ತು ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು.

ಗೋವಿನ ಮೇವಿಗಾಗಿ ಹುಲ್ಲು, ಹಿಂಡಿ ಮತ್ತಿತರ ಸಾಮಗ್ರಿ ಹೊತ್ತ ಲಾರಿಗಳು ಪಜೀರು ಗೋವನಿತಾಶ್ರಯ ಗೋ ಶಾಲೆಯೆಡೆಗೆ ಹೊರಟಿತು. ಕದ್ರಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಬೆಂದೂರುವೆಲ್ ಮಾರ್ಗವಾಗಿ ಕಂಕನಾಡಿ-ಪಂಪವೆಲ್, ತೊಕ್ಕೊಟ್ಟು ಆಗಿ ಕುತ್ತಾರು ಮಾರ್ಗವಾಗಿ ಕೊಣಾಜೆ ಗೋವನಿತಾಶ್ರಮವನ್ನು ತಲುಪಲಿದೆ. ಅಲ್ಲಿ ಗಣ್ಯರು, ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆದು, ಮೇವು ಸಮರ್ಪಿಸಲಾಗುತ್ತದೆ.

Edited By : Shivu K
Kshetra Samachara

Kshetra Samachara

14/11/2021 05:27 pm

Cinque Terre

4.47 K

Cinque Terre

0

ಸಂಬಂಧಿತ ಸುದ್ದಿ