ಉಡುಪಿ: ಯಕ್ಷಗಾನ ವೇಷ ಧರಿಸಿದ ಯುವಕನೊಬ್ಬ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಉಡುಪಿಯ ಮಣಿಪಾಲದ ಪಬ್ ವೊಂದರಲ್ಲಿ, ದೇವಿ ಮಹಾತ್ಮೆ ಪ್ರಸಂಗದಲ್ಲಿ ಬರುವ ಮಹಿಷಾಸುರನ ವೇಷ ಧರಿಸಿದ ಯುವಕ ಡಿಜೆ ಅಪರೇಟ್ ಮಾಡುತ್ತಿದ್ದ, ಇದನ್ನು ಪಬ್ ಗೆ ಹೋದವರು ವಿಡಿಯೋ ಮಾಡಿ ಸಾಮಾಜಿಕವಾಗಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಸದ್ಯ ಯಕ್ಷಗಾನ ವೇಷಧಾರಿ ಪಬ್‌ನಲ್ಲಿ ಡಿಜೆ ಅಪರೇಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಯಕ್ಷಗಾನ ಅಭಿಮಾನಿಗಳಿಂದ ಬಾರೀ ಆಕ್ರೋಶ ವ್ಯಕ್ತವಾಗಿದೆ. ಪಬ್‌ನಲ್ಲಿ ಯಕ್ಷಗಾನ ವೇಷವನ್ನು ಈ ರೀತಿಯಲ್ಲಿ ಬಳಸಿಕೊಳ್ಳುವುದು ಸರಿಯಲ್ಲ, ವೇಷಧಾರಿ ಈ ಬಗ್ಗೆ ಕ್ಷಮೆ ಕೇಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.
Kshetra Samachara
01/11/2021 02:25 pm