ಬೈಂದೂರು: ಸೈನ್ಯಕ್ಕೆ ಸೇರಬೇಕು, ದೇಶ ಕಾಯಬೇಕು ಅನ್ನೊದು ಅನೇಕ ಮಂದಿ ಗ್ರಾಮೀಣ ಯುವಕರ ಕನಸು. ಆದರೆ, ಸೈನ್ಯ ಸೇರುವ ಬಗ್ಗೆ ಮಾಹಿತಿ, ದೈಹಿಕ ತರಬೇತಿ ಇಲ್ಲದೇ ಹೆಚ್ಚಿನವರ ಕನಸು ನನಸಾಗೋದೇ ಇಲ್ಲ. ಇದಕ್ಕಾಗಿಯೇ ದೇಶಪ್ರೇಮಿಗಳ ತಂಡವೊಂದು ದೇಶ ಕಾಯುವ ಯುವಕರನ್ನು ತಯಾರು ಮಾಡುತ್ತಿದೆ!
ಉಡುಪಿ ಜಿಲ್ಲೆಯ ಬೈಂದೂರು ಭಾಗದ ಯುವಕರ ಪಡೆಯೊಂದು ಸೈನ್ಯಕ್ಕೆ ಸೇರಬಯಸುವ ಯುವಕರ ಕನಸನ್ನು ಕನಸು ಮಾಡುತ್ತಿದೆ. ಬೈಂದೂರು ನೇಷನ್ ಲವರ್ಸ್ ತಂಡ, ಉದ್ಯಮಿ ಗೋವಿಂದ ಬಾಬು ಪೂಜಾರಿ ಬೈಂದೂರು ಅವರ ಸಹಕಾರದಲ್ಲಿ ಪ್ರಶಾಂತ್ ದೇವಾಡಿಗ ನೇತೃತ್ವದಲ್ಲಿ ಬೈಂದೂರಿನ ನೂರಾರು ವಿದ್ಯಾರ್ಥಿಗಳಿಗೆ ಬೆಳಗ್ಗೆ
ಮೈದಾನದಲ್ಲಿ ಸೈನ್ಯಕ್ಕೆ ಸೇರುವ ಬಗ್ಗೆ ತರಬೇತಿ ನೀಡುತ್ತಿದೆ.
ಬೆಳಗ್ಗೆ 5.30ರಿಂದ 8.30ರ ವರೆಗೆ ದೈಹಿಕ ಪರೀಕ್ಷೆಗೆ ಇಲ್ಲಿ ತರಬೇತಿ ನಡೆಯುತ್ತಿದೆ. ದೈಹಿಕ ಕಸರತ್ತು ತರಬೇತಿ ನೀಡುವುದರ ಜೊತೆಗೆ ಸೈನ್ಯಕ್ಕೆ ಸೇರಲು ಲಿಖಿತ ಪರೀಕ್ಷೆ ಯಾವ ರೀತಿ ನಡೆಯುತ್ತವೆ, ಅದರ ತಯಾರಿ ಹೇಗೆ ಇರಬೇಕು ಎನ್ನುವ ಬಗ್ಗೆಯೂ ಮಾಜಿ ಸೈನಿಕರಿಂದ ತರಬೇತಿ ನೀಡಲಾಗುತ್ತಿದೆ. ನಾನಾ ಬಗೆಯ ದೈಹಿಕ ತರಬೇತಿ ನೀಡಿ, ಯುವಕರನ್ನು ಸದೃಢರನ್ನಾಗಿ ಮಾಡುತ್ತಿದೆ ನೇಷನ್ ಲವರ್ಸ್ ತಂಡ. ಇದುವೇ ಅಲ್ಲವೇ ನಿಜವಾದ ದೇಶಪ್ರೇಮ?.
Kshetra Samachara
16/10/2021 05:25 pm