ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮೆರೆದ ಮಾನವೀಯತೆ; ಯುವಕರಿಂದ ಗಾಯಾಳು ವ್ಯಕ್ತಿ ಮತ್ತು ಕೋತಿಯ ರಕ್ಷಣೆ

ಕಾಪು: ಗಾಯಗೊಂಡು ನರಳಾಡುತ್ತಿದ್ದ ಮನುಷ್ಯ ಮತ್ತು ಕೋತಿಯನ್ನು ಒಂದೇ ದಿನ ರಕ್ಷಿಸುವ ಮೂಲಕ ಕಾಪುವಿನ ಯುವಕರು ಮಾನವೀಯತೆ ಮೆರೆದಿದ್ದಾರೆ.

ಕಾಪು ಪೇಟೆಯಲ್ಲಿ ತಿರುಗಾಡುತ್ತಿದ್ದ ಪಣಿಯೂರು ಮೂಲದ ಮಾನಸಿಕ ಅಸ್ವಸ್ಥನೊಬ್ಬನ ಕೈಯಲ್ಲಿ ಗಾಯ ಉಂಟಾಗಿ ವೇದನೆ ಪಡುತ್ತಿದ್ದು, ಇದನ್ನು ಗಮನಿಸಿದ ಪ್ರಶಾಂತ್ ಪೂಜಾರಿ ಮತ್ತು ಶಿವಾನಂದ ಪೂಜಾರಿ ಅವರು ಜೊತೆಗೂಡಿ ಆರೈಕೆ ಮಾಡಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ದೊರಕಿಸಿ ಕೊಟ್ಟಿದ್ದಾರೆ.

ಮತ್ತೊಂದು ಘಟನೆಯಲ್ಲಿ ಪಣಿಯೂರು ಕುಂಜೂರು ಬಳಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಕೋತಿಯನ್ನು ರಕ್ಷಿಸಿ ಆರೈಕೆ ಮಾಡಿದ ಇವರಿಬ್ಬರು, ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ. ಈ ಸಂದರ್ಭ ಅರಣ್ಯ ಇಲಾಖೆಯ ಅಭಿಲಾಷ್, ಸ್ಥಳೀಯರಾದ ರಕ್ಷಿತ್, ಸುಜನ್ ಸಹಕರಿಸಿದರು.

Edited By : Manjunath H D
Kshetra Samachara

Kshetra Samachara

15/10/2021 03:55 pm

Cinque Terre

6.06 K

Cinque Terre

2

ಸಂಬಂಧಿತ ಸುದ್ದಿ