ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: "ಗೋವಿಂದ"ನ ದಯೆ; ರಿಕ್ಷಾ ಚಾಲಕನ ಸ್ವಂತ ಮನೆ ಆಸೆ ಈಡೇರಿಕೆ

ವರದಿ: ದಾಮೋದರ ಮೊಗವೀರ, ನಾಯಕವಾಡಿ

ಕುಂದಾಪುರ: ನಾಡಿನೆಲ್ಲೆಡೆ ಇಂದು ನವರಾತ್ರಿ ಪರ್ವಕಾಲದ ಭಕ್ತಿ ಸಂಭ್ರಮ. ಹಬ್ಬ ಬಂತೆಂದರೆ ಹಾಗೇ ಅಲ್ಲವೇ? ಜನಮನದಲ್ಲಿ ಅದೆನೋ ಹುರುಪು, ಉತ್ಸಾಹ... ಕೋವಿಡ್‌ ಸಂಕಷ್ಟ ಕಾಲವಾಗಿರುವುದರಿಂದ ಭಕ್ತಾದಿಗಳಲ್ಲಿ ಆ ಖುಷಿ-ಹುಮ್ಮಸ್ಸು ಕೊಂಚ ಕಡಿಮೆಯಾಗಿರಬಹುದಾದರೂ ಮೊದಲಿನ ಆ ಸಂಭ್ರಮಾಚರಣೆಯ ಮೂಡ್‌ ನಲ್ಲಿಯೇ ಇದ್ದಾರೆಂಬುದು ಸುಳ್ಳಲ್ಲ. ಹಾಗೇ ಕುಂದಾಪುರ ತಾಲೂಕಿನ ಕಾಳಾವರದಲ್ಲಿಯೂ ಆ ದಿನ ಶುಕ್ರವಾರ (ಅ.8) ಸಂತಸದ ವಾತಾವರಣ.

ಹೌದು, ಈ ಖುಷಿಗೊಂದು ಸಕಾರಣವಿದೆ. ಅಂದು ಉಪ್ಪುಂದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಗೋವಿಂದ ಬಾಬು ಪೂಜಾರಿ ಅವರು ಸಂಪೂರ್ಣ ಜವಾಬ್ದಾರಿ, ಆಸಕ್ತಿ ಹೊತ್ತು ನಿರ್ಮಿಸಿಕೊಟ್ಟ 5ನೇ ಮನೆಯ ಹಸ್ತಾಂತರ ಕಾರ್ಯಕ್ರಮ. ಈ ವೇಳೆ ನೂತನ ನಿವಾಸದ ಗೃಹಪ್ರವೇಶ ನೆರವೇರಿಸಿ ಮನೆ ಕೀಯನ್ನು ಫಲಾನುಭವಿಗಳಿಗೆ ನೀಡಲಾಯಿತು.

ನೋವಿನ ಕಥೆ ಅಡಗಿತ್ತು!: ಇಲ್ಲಿ ಆಟೋರಿಕ್ಷಾ ಚಾಲಕರೊಬ್ಬರ ದುರಂತ ಕಥನವಿದೆ. ಕಾಳಾವರದ ನರಿಕೋಡ್ಲು ಮನೆಯ ಸತೀಶ್ ಪೂಜಾರಿ ವೃತ್ತಿಯಲ್ಲಿ ರಿಕ್ಷಾ ಡ್ರೈವರ್.‌ ಅವರೂ ಕೂಡ ಸರ್ವೇ ಸಾಮಾನ್ಯವಾಗಿ ಎಲ್ಲರಂತೆ ತಾನೂ ಸ್ವಂತದ್ದೊಂದು ಮನೆ ಕಟ್ಟಿಸಬೇಕು ಎಂದು ಹೊಸ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದರು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಮನೆ ಪೂರ್ಣವಾಗುವ ಮೊದಲೇ ಅವರು ಅಕಾಲಿಕ ಸಾವಿಗೆ ತುತ್ತಾಗುತ್ತಾರೆ. ಇದರಿಂದಾಗಿ ಅವರ ಮನೆಯವರಿಗೆ ಮನೆ ನಿರ್ಮಿಸಲು ಅಸಾಧ್ಯವಾಗಿ ತೀವ್ರ ಕಷ್ಟದಲ್ಲಿರುತ್ತಾರೆ. ಈ ವಿಚಾರವನ್ನು ಸ್ಥಳೀಯರೊಬ್ಬರು ದಾನಿ ಗೋವಿಂದ ಬಾಬು ಪೂಜಾರಿಯವರ ಗಮನಕ್ಕೆ ತರುತ್ತಾರೆ.

ನೆರವಿಗೆ ಧಾವಿಸಿದ ಸಹೃದಯಿ: ವಿಚಾರ ಅರಿತ ಗೋವಿಂದ ಬಾಬು ಪೂಜಾರಿಯವರು ಸ್ವತಃ ಸ್ಥಳ ಪರಿಶೀಲಿಸಿ, ಮನೆಯನ್ನು ತಾನೇ ಮುಂದೆ ನಿಂತು ಪೂರ್ಣಗೊಳಿಸಿ ಕೊಡುವ ಭರವಸೆಯನ್ನು ಮನೆಯವರಿಗೆ ನೀಡಿ, ಧೈರ್ಯ ತುಂಬಿದರು. ಅದರಂತೆ

ಇದೀಗ ಸುಸಜ್ಜಿತ ಮನೆ ರೆಡಿಯಾಗಿದ್ದು, ನಿನ್ನೆ "ಶ್ರೀ ವರಲಕ್ಷ್ಮಿ ನಿಲಯ" ಗೃಹಪ್ರವೇಶ ನಡೆದು, ಸತೀಶ್‌ ಪೂಜಾರಿಯವರ ಬಡಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೋವಿಂದ ಬಾಬು ಪೂಜಾರಿ ದಂಪತಿ, ಅಶೋಕ್ ಪೂಜಾರಿ ಬಿಲ್ಲಾಡಿ, ಆಶಾಲತಾ ಶೆಟ್ಟಿ, ಪಂಚಾಯಿತಿ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

08/10/2021 09:26 pm

Cinque Terre

21.74 K

Cinque Terre

5

ಸಂಬಂಧಿತ ಸುದ್ದಿ