ಮಂಗಳೂರು: ತುಳುನಾಡಿನ ಸೂರ್ಯ ಚಂದ್ರನ ಚಿಹ್ನೆ, ಮೂಡಬಿದ್ರೆ - ಲಡಾಕ್, ಕರ್ನಾಟಕ - ಕಾಶ್ಮೀರ , ಮಿಸ್ಟರ್ ರೈಡರ್ ಬೆದ್ರ ಹೀಗೆ ಸಂಪರ್ಕ ವಿವರ ಹೊತ್ತ ನಾಮಫಲಕದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಿಂದ ಕಾಶ್ಮೀರಕ್ಕೆ ಸೈಕಲ್ ಸವಾರಿ ಮಾಡಿದ ಪ್ರಾಂತ್ಯ ಗ್ರಾಮ ಲಾಡಿಯ ಮಹಮ್ಮದ್ ಆರೀಫ್ ಎಂಬ ಯುವಕ ಮೂಡುಬಿದಿರೆ ತಲುಪಿದ್ದಾರೆ.
ಆರೀಫ್ ಅವರ ತಾಯಿ ನಝೀಮ ಪ್ರಾಂತ್ಯದಲ್ಲಿ ಅವರನ್ನು ಸ್ವಾಗತಿಸಿದರು. ಇದೇ ವೇಳೆ ಮಾತನಾಡಿದ ಆರೀಫ್, ನಾನು ಆಗಸ್ಟ್ 2ರಂದು ಮೂಡಬಿದಿರೆಯಿಂದ ಸೈಕಲ್ ಮೂಲಕ ಲಡಾಕ್‌ಗೆ ಪ್ರಯಾಣ ಪ್ರಾರಂಭಿಸಿದೆ. ಮನೆಯವರ ಪ್ರೋತ್ಸಾಹ, ನಾನು ಕೆಲಸ ಮಾಡುತ್ತಿರುವ ಮೆಟಲ್ ಶಾಪ್ ಮಾಲಿಕ ನಝೀರ್ ಅವರ ವಿಶೇಷ ಸಹಕಾರದಿಂದಾಗಿ ಸೈಕಲ್‌ನಲ್ಲಿ ಲಡಾಕ್ ಪ್ರಯಾಣ ಬೆಳೆಸುವ ನನ್ನ ಕನಸು ನನಸಾಗಿದೆ. ಪ್ರಯಾಣದುದ್ದಕ್ಕೂ ವಿವಿಧ ಭಾಗಗಳ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗಿದೆ. ಪ್ರಯಾಣದಿಂದಾಗಿ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದರು.
ಮೆಟಲ್ ಶಾಪ್ ಮಾಲಿಕ ನಝೀರ್ ಅವರು ಮಾತನಾಡಿ, ನಮ್ಮ ಅಂಗಡಿಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿರುವ ಆರೀಫ್ ಲಡಾಕ್‌ಗೆ ಸೈಕಲ್ ಸವಾರಿ ಮಾಡುವ ತಮ್ಮ ಇಚ್ಛೆಯನ್ನು ಹೇಳಿಕೊಂಡಿದ್ದರು. 3500 ಕಿ.ಮೀ ಹೆಚ್ಚು ಅವರು ಸೈಕಲ್ ಸವಾರಿ ಮಾಡಿರುವುದು ಖುಷಿ ನೀಡಿದೆ ಎಂದರು.
Kshetra Samachara
26/09/2021 01:05 pm