ಕುಕ್ಕೆಹಳ್ಳಿ: ಸ್ವಂತದ್ದೊಂದು ಸೂರು ಬೇಕು ಅನ್ನುವುದು ಎಲ್ಲರ ಆಸೆ.ಆದರೆ ಕನಸಿನ ಮನೆಯನ್ನು ನನಸು ಮಾಡುವುದು ಅಷ್ಟು ಸುಲಭ ಅಲ್ಲ.ಆದರೆ ಉಡುಪಿಯಲ್ಲಿ ಬಡ ಮಹಿಳೆಯೊಬ್ಬರ ಮನೆ ಕಟ್ಟುವ ಕನಸು ಸಾಕಾರಗೊಂಡಿದ್ದು ಹೇಗೆ ? ಈ ಸ್ಟೋರಿ ನೋಡಿ.
ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಸಮೀಪದ ಜಯಲಕ್ಷ್ಮೀ ಆಚಾರ್ಯ ಅವರ ಗಂಡ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಗಂಡನ ಮನೆ ಹಾಗೂ ತವರು ಮನೆಯಿಂದ ದೂರವಾದ ಜಯಲಕ್ಷ್ಮಿ, ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಸಂಪೂರ್ಣ ಶೀಥಿಲಾವಸ್ಥೆಯ ಗುಡಿಸಲಿನಲ್ಲೇ ಜೀವನ ನಡೆಸುತ್ತಿದ್ದರು.ಗುಡಿಸಲಲ್ಲೇ ಇದ್ದು ಪುಟ್ಟ ಮನೆಯ ಕನಸು ಕಾಣುತ್ತಿದ್ದರು.ಆದರೆ ಮನೆ ಕಟ್ಟುವ ಕನಸಿಗೆ ಬಡತನ ತೊಡಕಾಗಿತ್ತು. ಕನಸು ನನಸಾಗದೇ ಹಾಗೇ ಉಳಿದಿತ್ತು..
ಜಯಲಕ್ಷ್ಮಿ ಅವರ ಬಡತನ, ಶಿಥಿಲಾವಸ್ಥೆಯ ಮನೆಯನ್ನು ಗಮನಿಸಿದ ಯುವಕರ ತಂಡವೊಂದು ಮಹಿಳೆಗೆ ಮನೆ ನಿರ್ಮಾಣ ಮಾಡಿ ಕೊಡುವ ಒಂದೊಳ್ಳೆಯ ತೀರ್ಮಾನಕ್ಕೆ ಬಂದರು, 25 ಮಂದಿ ಯುವಕರು ಸೇರಿಕೊಂಡು ಮನೆ ನಿರ್ಮಾಣ ಸಮಿತಿ ರಚಿಸಿ, ತಾವೇ ಹಣ ಹೊಂದಿಸಿಕೊಂಡು ಸಮಯ ಸಿಕ್ಕಾಗ ಮನೆಯ ಕೆಲಸ ಮಾಡಿದರು, ಯುವಕರ ಒಳ್ಳೆಯ ಕಾರ್ಯ ನೋಡಿ ದಾನಿಗಳು ಸಹಾಯ ಮಾಡಿ ಪ್ರೋತ್ಸಾಹ ನೀಡಿದರು.ಇವರೆಲ್ಲರ ಪರಿಶ್ರಮದಿಂದ ಬಡ ಮಹಿಳೆಗೆ ಚಂದದ ನಿರ್ಮಾಣ ಆಯ್ತು!
ಒಟ್ಟಿನಲ್ಲಿ ಯುವಕರ ಒಳ್ಳೆಯ ಮನಸ್ಸಿನಿಂದಾಗಿ ಬಡ ಮಹಿಳೆಯೊಬ್ಬರಿಗೆ ಚಂದದ ಮನೆ ನಿರ್ಮಾಣ ಆಗಿದೆ. ಯುವಕರ ತಂಡಕ್ಕೂ ಮನೆ ನಿರ್ಮಿಸಿ ಕೊಟ್ಟ ಸಂತೃಪ್ತಿ ,ಬಡ ಮಹಿಳೆಗೂ ಮನೆ ಸಿಕ್ಕಿದ ಖುಷಿ.ಇಂತಹ ಯುವಕರ ಸಂತತಿ ಸಾವಿರವಾಗಲಿ.
Kshetra Samachara
23/09/2021 05:37 pm