ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಮಂಗನ ಶಾಸ್ತ್ರೋಕ್ತ ಅಂತ್ಯಸಂಸ್ಕಾರ ವನ್ನು ಸ್ಥಳೀಯರು ನಡೆಸಿ ಮಾದರಿಯಾಗಿದ್ದಾರೆ. ಶನಿವಾರ ಸಂಜೆ ಸುಮಾರು 7.30 ಘಂಟೆಗೆ ಮುಲ್ಕಿ ಬಸ್ಸುನಿಲ್ದಾಣದ ಕೆಳ ಬದಿಯ ಆರ್ ಆರ್ ಟವರ್ಸ್ ಬಳಿ ಮೂರು ಮಂಗಗಳು ಹೆದ್ದಾರಿ ದಾಟುತ್ತಿದ್ದ ಸಂದರ್ಭ ಒಂದು ಮಂಗಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಮೃತಪಟ್ಟಿತು.
ಈ ಸಂದರ್ಭ ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ,ಮುಲ್ಕಿ ಆಟೋ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ , ಸ್ಥಳೀಯ ಗ್ಯಾರೇಜ್ ಮಾಲಕರು, ಕೂಲಿ ಕಾರ್ಮಿಕರು ಮತ್ತಿತರರು ಸೇರಿ ಅಂತಿಮ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.
Kshetra Samachara
12/09/2021 05:33 pm