ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಉಡುಪಿ:ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್(ಮುಂಬೈ), ಭಾರತೀಯ ಮನೋವೈದ್ಯಕೀಯ ಸಂಘ(ದಕ್ಷಿಣ ಪ್ರಾಂತ್ಯ ಘಟಕ), ಸಮುದಾಯ ಮಾನಸಿಕ ಅರಿವು ಮೂಡಿಸುವ ಗುಂಪು ಹಾಗೂ ಉಡುಪಿ ಮನೋವೈದ್ಯಕೀಯ ಸಂಘದ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ನಡೆಯಿತು.ಮಣಿಪಾಲ ಕೆಎಂಸಿ ಮನೋವೈದ್ಯ ಡಾ. ರವೀಂದ್ರ ಮುನೋಳಿ ಉದ್ಘಾಟನೆ ನೆರವೇರಿಸಿದರು.

ಈ ವೇಳೆ ಅಧ್ಯಕ್ಷತೆ ವಹಿಸಿ ಮಾತನಾಡಿದ ದೊಡ್ಡಣಗುಡ್ಡೆಯ ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ವಿ. ಭಂಡಾರಿ,ಆತ್ಮಹತ್ಯೆಯು ಜನರನ್ನು ಕಾಡುವ ಆರೋಗ್ಯ ಸಮಸ್ಯೆ ಎನ್ನುವುದನ್ನು ನಮ್ಮನ್ನಾಳುವ ಅರಸರು, ಅಧಿಕಾರಿಗಳು ಅರಿಯಬೇಕು. ಆತ್ಮಹತ್ಯೆ ತಡೆಗಟ್ಟುವ ಸಂದೇಶವನ್ನು ಜನರಿಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಶಿಕ್ಷಕರು, ಶಿಕ್ಷಣ ಸಂಸ್ಥೆ, ಹೆತ್ತವರು,ಮಾಧ್ಯಮ, ವೈದ್ಯರು ಎಚ್ಚೆತ್ತರೆ ಆತ್ಮಹತ್ಯೆ ತಡೆ ಸಾಧ್ಯ.

ಮಕ್ಕಳ ಮಾತು, ಸಮಸ್ಯೆ ಆಲಿಸುವ ಮನಸ್ಥಿತಿಯನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಕೈಗಾರಿಕೆಗಳಾಗಿ ಮಕ್ಕಳು ಅಂಕ ಸೃಷ್ಟಿಯ ಯಂತ್ರಗಳಾಗುತ್ತಿದ್ದಾರೆ ಎಂದರು.

ಮನೋತಜ್ಞರಾದ ಡಾ. ಮಾನಸ್, ಡಾ. ದೀಪಕ್ ಮಲ್ಯ, ಡಾ. ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು. ವಿದ್ಯುತ್ ಕಂಪನ ಚಿಕಿತ್ಸೆ ಕುರಿತು ಮನೋಶಾಸ್ತ್ರಜ್ಞ ನಾಗರಾಜ್ ಮೂರ್ತಿ ಮಾಹಿತಿ ನೀಡಿದರು.

ಆಪ್ತ ಸಮಾಲೋಚಕಿ ಪಾವನಾ ಪ್ರಾರ್ಥಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಆಪ್ತ ಸಮಾಲೋಚಕ ಲೋಹಿತ್ ನಿರೂಪಿಸಿದರು. ಸಮುದಾಯ ಕಾರ್ಯಕರ್ತ ಸುರೇಶ್ ಎಸ್. ನಾವುರ್ ವಂದಿಸಿದರು.

Edited By : PublicNext Desk
Kshetra Samachara

Kshetra Samachara

07/09/2021 06:45 pm

Cinque Terre

12.48 K

Cinque Terre

0

ಸಂಬಂಧಿತ ಸುದ್ದಿ