ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಿತ್ಯವೂ ಬೀದಿನಾಯಿಗಳಿಗೆ ಅನ್ನವನಿಕ್ಕಿ ಮಕ್ಕಳಿಲ್ಲದ ಕೊರತೆಯನ್ನು ಮರೆತ ದಂಪತಿ; ಇವರದು ಅಪೂರ್ವ ಶ್ವಾನ ಪ್ರೀತಿ

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ...

ಮಂಗಳೂರು: ಮಕ್ಕಳಿಲ್ಲದ ದಂಪತಿ ಮಕ್ಕಳನ್ನು ದತ್ತು ಕೊಂಡು ಸಾಕುವುದು ನಾವು ಎಲ್ಲೆಡೆ ನೋಡುತ್ತೇವೆ. ಇಲ್ಲೊಬ್ಬ ದಂಪತಿ ಮಕ್ಕಳಿಲ್ಲದ ಕೊರಗನ್ನು ಬೀದಿ ನಾಯಿಗಳಿಗೆ ಬಾಡೂಟವನ್ನು ನೀಡಿ ಮರೆಯುತ್ತಿದ್ದಾರೆ.

ಮಂಗಳೂರಿನ ರಿಸರ್ವ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪೂವಪ್ಪ ಕೆ. ಹಾಗೂ ಪತ್ನಿ ರಾಗಿಣಿ ಕೆ. ಬೀದಿ ನಾಯಿಗಳಿಗೆ ಬಾಡೂಟ ನೀಡುತ್ತಿರುವವರು. ಪೂವಪ್ಪ ಕೆ. ಅವರು ಇಲಾಖೆಗೆ ಸೇರಿ 32 ವರ್ಷಗಳಾಗಿದ್ದು, ಕಳೆದ 15 ವರ್ಷಗಳಿಂದ ಈ ದಂಪತಿ ಮಂಗಳೂರಿನ ಪೊಲೀಸ್ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅಲ್ಲಿಯೇ ಸುತ್ತಮುತ್ತಲು ಇರುವ ಬೀದಿ ನಾಯಿಗಳಿಗೆ ಬೆಳಗ್ಗೆ-ರಾತ್ರಿ ಎರಡು ಹೊತ್ತಿನ ಊಟವನ್ನು ನಿತ್ಯವೂ ಹಾಕುತ್ತಿದ್ದಾರಂತೆ. ಅದೂ ಬಾಡೂಟವನ್ನು‌. ಈ ದಂಪತಿ ತಿಂಗಳೊಂದಕ್ಕೆ ನಾಯಿಗಳಿಗೆ ಆಹಾರ ಒದಗಿಸಲೆಂದೇ ಸುಮಾರು 15 ಸಾವಿರ ರೂ. ಖರ್ಚು ಮಾಡುತ್ತಿದ್ದಾರಂತೆ.

ನಿತ್ಯವೂ ಬಾಡೂಟವನ್ನೇ ನೀಡುವ ಪೂವಪ್ಪ - ರಾಗಿಣಿ ದಂಪತಿ, ನಾಯಿಗಳಿಗೆ ಕೋಳಿ ಮಾಂಸ, ಲೆಗ್ ಪೀಸ್, ಅನ್ನವನ್ನು ಹಾಕುತ್ತಾರಂತೆ. ಆದರೆ ಯಾವತ್ತೂ ಎಂಜಲು, ಹಳಸಿದ್ದು ಹಾಕೋದೇ ಇಲ್ಲವಂತೆ. ಅಲ್ಲದೆ ಯಾವುದಾರೂ ನಾಯಿಗೆ ಹುಷಾರು ತಪ್ಪಿದ್ದಲ್ಲಿ ಹಾಲು, ಬಿಸ್ಕತ್ತು ನೀಡುತ್ತಾರಂತೆ. ಅಲ್ಲದೆ ಅದಕ್ಕೆ ಬೇಕಾದ ಔಷಧೋಪಚಾರವನ್ನೂ ಒದಗಿಸುತ್ತಾರಂತೆ. ಅನಿವಾರ್ಯ ಕಾರಣಗಳಿಂದ ಇಲ್ಲದಿದ್ದಾಗ, ನಾಯಿಗಳು ಹಸಿವಿನಿಂದ ಇರಬಾರದೆಂದು ಪೂವಪ್ಪನವರು ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿ ಅನ್ನಾಹಾರ ಒದಗಿಸುತ್ತಾರಂತೆ. ಒಟ್ಟಿನಲ್ಲಿ ಈ ದಂಪತಿಯ ಪ್ರಾಣಿ ಪ್ರೇಮ ಶ್ಲಾಘನೀಯ. ಈ ಸೇವೆ, ಶ್ವಾನಪ್ರೀತಿ ನಿರಂತರವಾಗಿರಲಿ ಎಂಬುದೇ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Shivu K
Kshetra Samachara

Kshetra Samachara

06/09/2021 12:04 pm

Cinque Terre

13.77 K

Cinque Terre

2

ಸಂಬಂಧಿತ ಸುದ್ದಿ