ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವೇಷ ಕಳಚಿದ ಬಳಿಕ...

ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ರವಿ ಕಟಪಾಡಿ ಅವರು ಪ್ರತಿವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭ ನಾನಾ ವೇಷ ಧರಿಸಿ ಬಡ, ಅಸಹಾಯಕ ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ಹಣ ದಾನ ಮಾಡುತ್ತಾರೆ.

ಈ ಬಾರಿ ರವಿ, ' ಡಾರ್ಕ್ ವನ್ ಅಲೈಟ್' ಎಂಬ ಹಾಲಿವುಡ್ ಸಿನಿಮಾದ ಭಯಾನಕ ವೇಷ ಧಾರಣೆ ಮಾಡಿ, ಎರಡು ದಿನಗಳವರೆಗೆ ಉಡುಪಿಯಲ್ಲಿ ವೇಷದ ಸಹಜತೆ ಕಾಪಾಡಿಕೊಂಡು, ತಿರುಗಾಡಿ ಸಹೃದಯರಿಂದ ನಿಧಿ ಸಂಗ್ರಹಿಸಿದ್ದಾರೆ. ಈ ಹಣ ಆರು ಮಂದಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವಿನಿಯೋಗವಾಗಲಿದೆ.

ಹೀಗೆ ಹಚ್ಚಿದ ಬಣ್ಣ( ಪೈಂಟ್) ತೆಗೆದು, ವೇಷ ಕಳಚಿದ ಬಳಿಕ ಈ ಬಡಪಾಯಿ ಕೂಲಿಕಾರ್ಮಿಕ ರವಿ ಕಟಪಾಡಿ ಅವರ ಮುಖ ಹೇಗಾಗಿದೆ ನೋಡಿ!

ಕಳೆದ ಏಳು ವರ್ಷಗಳಿಂದ ರವಿ ಅವರು ಈ ರೀತಿ ತರಹೇವಾರಿ ವೇಷ ಹಾಕಿ ಒಟ್ಟು ಸುಮಾರು 72 ಲಕ್ಷ ರೂ. ಸಂಗ್ರಹಿಸಿದ್ದು, ಎಲ್ಲ ಹಣವನ್ನೂ ಅನಾರೋಗ್ಯ ಪೀಡಿತ ಬಡ 33 ಮಕ್ಕಳಿಗೆ ವಿತರಿಸಿ, ಮಾನವೀಯತೆ ಮೆರೆದಿದ್ದಾರೆ

Edited By : Shivu K
Kshetra Samachara

Kshetra Samachara

02/09/2021 02:41 pm

Cinque Terre

16.5 K

Cinque Terre

11