ಬೈಂದೂರು :ಕುಂದಾಪುರ ತಾಲ್ಲೂಕಿನ ಕಂಚುಗೋಡು ನಿವಾಸಿಯಾದ ಸುಬ್ರಹ್ಮಣ್ಯ ಖಾರ್ವಿ ಹೊಕ್ಕುಳ ಬಳ್ಳಿ ಸಮಸ್ಯೆಯಿಂದ ಬಳಲುತ್ತಿದ್ದು .ಸ್ವಲ್ಪ ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿದ್ದು ಈಗಾಗಲೇ ಸಾಲ ಮಾಡಿ ಲಕ್ಷಾಂತರ ಹಣ ಖರ್ಚಾಗಿದೆ. ಅದರಿಂದ ಚೇತರಿಸಿಕೊಳ್ಳುವ ಮುನ್ನವೇ ಪ್ರಸ್ತುತ ಅವರು ನರ ದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಾರೆ .
ಮೊದಲೇ ಸಾಲದ ಸುಳಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದ ಸುಬ್ರಹ್ಮಣ್ಯ ಖಾರ್ವಿಗೆ ಅವರ ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಕಾರಣ ಮಾಧ್ಯಮದ ಮೂಲಕ ದಾನಿಗಳ ನೆರವಿಗಾಗಿ ಕೈ ಚಾಚುತ್ತಿದ್ದಾರೆ .
ಬಡ ಮೀನುಗಾರಿಕಾ ಕುಟುಂಬದಲ್ಲಿ ಜನಿಸಿದ ಸುಬ್ರಹ್ಮಣ್ಯ ಖಾರ್ವಿ ಮೀನುಗಾರಿಕೆ ಮೂಲ ವೃತ್ತಿಯಾಗಿಸಿಕೊಂಡು ದುಡಿಯುತ್ತಿದ್ದರು .ಆದರೆ ಇಂತಹ ಸಮಯದಲ್ಲಿ ಕೆಲಸ ಮಾಡಲು ಅವರ ದೇಹ ಸ್ಪಂದಿಸದೇ ಇದ್ದ ಕಾರಣ ಪೆಟ್ರೋಲ್ ಬಂಕ್ ನಲ್ಲಿ ಕೆಲವು ಸಮಯದಿಂದ ಕೆಲಸ ಮಾಡಿಕೊಂಡಿದ್ದು .ಕಳೆದ 1ವರ್ಷದಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಹೊಕ್ಕುಳ ಬಳ್ಳಿ ಹಾಗೂ ನರದೌರ್ಬಲ್ಯ ಕಾಯಿಲೆ ಉಲ್ಬಣಿಸಿದ್ದು ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು ಪತ್ನಿ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡಿ ಅವರ ದುಡಿಮೆಯಿಂದಲೇ ಸಂಸಾರ ನಿವಾರಣೆ ಆಗಬೇಕಾಗಿದೆ .
ಹೌದು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದಾನಿಗಳ ನೆರವು ಬೇಕಾಗಿದೆ .
ಅವರ ಬ್ಯಾಂಕ್ ಖಾತೆಗೆ ಹಣವನ್ನು ಕಳಿಸಬಹುದಾಗಿದೆ
ಬ್ಯಾಂಕ್ ಖಾತೆಯ ಹೆಸರು : ಸುಬ್ರಹ್ಮಣ್ಯ ಖಾರ್ವಿ ಖಾತೆ ಸಂಖ್ಯೆ _0604108019482. ಐ .ಎಫ್ .ಎಸ್ .ಸಿ ಕೋಡ್ -C N R B 0000604 ಶಾಖೆ ಗಂಗೊಳ್ಳಿ
Kshetra Samachara
29/08/2021 03:40 pm