ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಾರ್ಕಿಂಗ್ ಏರಿಯಾದಲ್ಲಿ ದೊರೆತ ಚಿನ್ನದ ಬಳೆ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ವಿಮಾನ ನಿಲ್ದಾಣದ ಸಿಬ್ಬಂದಿ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಪಾರ್ಕಿಂಗ್ ಏರಿಯಾದಲ್ಲಿ ದೊರೆತ ಚಿನ್ನದ ಬಳೆಯನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಡೊಂಬಯ್ಯ ಪೂಜಾರಿಯವರು ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಇಂದು ನಡೆದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ರಾಲಿ ರಿಟ್ರಿವರ್ ಆಗಿರುವ ಡೊಂಬಯ್ಯ ಪೂಜಾರಿ ಅವರಿಗೆ ಪಾರ್ಕಿಂಗ್ ಸ್ಥಳದಲ್ಲಿ ಚಿನ್ನದ ಬಳೆಯೊಂದು ದೊರಕಿದೆ. ಹೀಗೆ ದೊರೆತ ಬಳೆಯನ್ನು ವಿಮಾನ‌ ನಿಲ್ದಾಣದ ಲಾಸ್ಟ್ & ಫೌಂಡ್ ಚೇಂಬರ್‌ಗೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ 'ಡೊಂಬಯ್ಯ ಪೂಜಾರಿಯವರ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ನಾವು ಅಭಿನಂದಿಸುತ್ತೇವೆ ಎಂದು #gatewaystogoodness ಎನ್ನುವ ಟ್ಯಾಗ್ ಲೈನ್ ಜತೆ ಹಂಚಿಕೊಂಡಿದೆ.

Edited By : Nagaraj Tulugeri
Kshetra Samachara

Kshetra Samachara

27/08/2021 09:30 pm

Cinque Terre

6.97 K

Cinque Terre

0

ಸಂಬಂಧಿತ ಸುದ್ದಿ