ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಬೂಲ್ ಮಿಲಿಟರಿ ಬೇಸ್ ಉದ್ಯೋಗದಲ್ಲಿದ್ದ ಮಂಗಳೂರಿನ ಡೆಮ್ಸಿ ಮೊಂತೆರೊ ತವರಿಗೆ ವಾಪಸ್

ಮಂಗಳೂರು: ಅಫ್ಘಾನಿಸ್ತಾನದ ಕಾಬೂಲ್‌ನ ಮಿಲಿಟರಿ ಬೇಸ್‌ನಲ್ಲಿ ಎಸಿ ಟೆಕ್ನಿಶಿಯನ್ ಆಗಿದ್ದ ಮಂಗಳೂರಿನ ಡೆಮ್ಸಿ ಮೊಂತೆರೊ ಉಳ್ಳಾಲದ ಉಳಿಯ ನಿವಾಸಕ್ಕೆ ವಾಪಸಾಗಿದ್ದಾರೆ.

ಡೆಮ್ಸಿ ಮೊಂತೆರೊ ಉದ್ಯೋಗ ನಿಮಿತ್ತ ಐದು ವರ್ಷಗಳ ಹಿಂದೆ ಅಫ್ಘಾನ್ ಗೆ ತೆರಳಿದ್ದರು. ಅಫ್ಘಾನ್‌ನನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಕಾಬೂಲ್‌ನಲ್ಲಿ ಉದ್ಯೋಗದಲ್ಲಿದ್ದ ಒಟ್ಟು 150 ಮಂದಿ ಭಾರತೀಯರನ್ನು ಅಮೆರಿಕ ನ್ಯಾಟೋ ಪಡೆ ಕತಾರ್‌ಗೆ ಏರ್ ಲಿಫ್ಟ್ ಮಾಡಿತ್ತು. ಅದರಲ್ಲಿ ಡೆಮ್ಸಿ ಮೊಂತೆರೊ ಕೂಡ ಇದ್ದರು. ಇದರಿಂದ ಕೆಲವು ದಿನ ಕತಾರ್‌ನಲ್ಲಿ ಉಳಿದಿದ್ದ ಅವರು ಸೋಮವಾರ ಕತಾರ್‌ನಿಂದ ಭಾರತೀಯ ರಾಯಭಾರಿ ಕಚೇರಿ ಸಹಕಾರದಿಂದ ದೆಹಲಿಗೆ ತಲುಪಿದ್ದರು. ಅಲ್ಲಿಂದ ಮುಂಬೈಗೆ ಬಂದ ಅವರು ಮಂಗಳೂರು ತಲುಪಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅವರ ಅಣ್ಣ ಮೆಲ್ವಿನ್ ಊರಿಗೆ ಮರಳಿದ್ದರು.

Edited By : Manjunath H D
Kshetra Samachara

Kshetra Samachara

25/08/2021 12:08 pm

Cinque Terre

19.46 K

Cinque Terre

0

ಸಂಬಂಧಿತ ಸುದ್ದಿ