ಮಂಗಳೂರು: ಅಫ್ಘಾನಿಸ್ತಾನದಿಂದ ಏರ್ ಲಿಫ್ಟ್ ಮೂಲಕ ತವರಿಗೆ ಭಾರತೀಯರು ವಾಪಸ್ ಆಗುತ್ತಿದ್ದಾರೆ. ಇದೀಗ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ನಿವಾಸಿ ದಿನೇಶ್, ಮೂಡಬಿದಿರೆಯ ಜಗದೀಶ್ ಪೂಜಾರಿ, ಮುಲ್ಕಿಯ ಡೆಸ್ಮಂಡ್ ಡೇವಿಡ್ ಡಿಸೋಜ, ಬಿಜೈನ ಶ್ರವಣ್ ಅಂಚನ್ ಸೇರಿದಂತೆ ನಾಲ್ಕು ಮಂದಿ ಅಫ್ಘಾನಿಸ್ತಾನದಿಂದ ತವರಿಗೆ ವಾಪಸ್ ಆಗಿದ್ದಾರೆ.
ಇದೇ ವೇಳೆ ಅಫ್ಘಾನಿಸ್ತಾನದಿಂದ ಬಂದ ಜಗದೀಶ್ ಪೂಜಾರಿ ಮಾಧ್ಯಮಗಳೊಂದಿಗೆ ಮಾತನಾಡಿ, "ನಾನು ಆಗಸ್ಟ್ 11ರಂದು ಅಫ್ಘಾನಿಸ್ತಾನಕ್ಕೆ ಹೋಗಿದ್ದೆ. ಈಗ ನೋಡಿದರೆ ವಾಪಸ್ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಏನು ಅನ್ನುವುದು ಗೊತ್ತಿಲ್ಲ. ಸದ್ಯ ಮಂಗಳೂರಿನಲ್ಲೇ ಇರುತ್ತೇನೆ. ಅಫ್ಘಾನ್ ಜನರ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಮನೆಯವರಲ್ಲಿ ಆತಂಕ ಇದ್ದರೂ ನಾವು ಧೈರ್ಯ ತುಂಬುತ್ತಾ ಇದ್ದೆವು. ನಾವು ಆರ್ಮಿ ಬೇಸ್‌ನಲ್ಲೇ ಇದ್ದ ಕಾರಣ ನಮಗೆ ಅಷ್ಟಾಗಿ ಹೊರಗಿನ ಮಾಹಿತಿ ಇಲ್ಲ. ಕೆಲ ಸ್ಥಳೀಯ ಅಫ್ಘಾನಿಗರು ಹೇಳ್ತಾ ಇದ್ದ ಕಾರಣ ಮಾಹಿತಿ ಬರುತ್ತಿತ್ತು. ಆರ್ಮಿ ಬೇಸ್‌ನಲ್ಲಿ ಕೆಲಸ ಮಾಡುವ ಸ್ಥಳೀಯರು ತಾಲಿಬಾನ್ ಟಾರ್ಗೆಟ್. ಆದರೆ ನಾವು ಸೆರೆಮನೆಯಲ್ಲಿದ್ದಂತೆ, ನಮಗೆ ಹೊರ ಜಗತ್ತಿನ ಸಂಪರ್ಕ ಇರಲಿಲ್ಲ ಎಂದರು.
Kshetra Samachara
23/08/2021 11:04 pm