ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅನಾಗರಿಕ ಬದುಕು ಸಾಗಿಸುತ್ತಿದ್ದ ವ್ಯಕ್ತಿಯ ರಕ್ಷಣೆ

ಉಡುಪಿ: ಬೈಕಾಡಿ ಭದ್ರಗಿರಿ ಚರ್ಚ್ ರಸ್ತೆಯ ಹತ್ತಿರ ನಾಗರಿಕ ಸಮಾಜದಲ್ಲಿ ಅನಾಗರಿಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ, ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ ಘಟನೆ ಗುರುವಾರ ನಡೆದಿದೆ. ವ್ಯಕ್ತಿ ಅಸಹಾಯಕ ಸ್ಥಿತಿಯಲ್ಲಿರುವ ಬಗ್ಗೆ, ಬ್ರಹ್ಮಾವರ ಕ್ಷಯರೋಗ ಘಟಕದ ಮೇಲ್ವಿಚಾರಕ ಮಂಜುನಾಥ್ ಆಲಂದೂರು ಅವರು, ಸಮಾಜಸೇವಕರಿಗೆ ಮಾಹಿತಿ ನೀಡಿದ್ದರು.

ರಕ್ಷಣಾ ಕಾರ್ಯಚರಣೆಯಲ್ಲಿ ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು, ಆಶಾ ಕಾರ್ಯಕರ್ತೆ ತುಳಸಿ ಬೈಕಾಡಿ ಅವರು ಸಹಕರಿಸಿದರು. ರಕ್ಷಿಸಲ್ಪಟ್ಟಿರುವ ರೋಗಿಯನ್ನು ಆಲ್ಫರ್ಡ್ ಡಿಸೋಜ (58 ವ) ತಂದೆ ರೆಗೋರಿ ಡಿಸೋಜ ಎಂದು ಗುರುತಿಸಲಾಗಿದೆ. ಆಲ್ಫರ್ಡ್ ಅವರು ಬಿ.ಎಸ್.ಸಿ ಪದವಿಧರ, ಈ ಹಿಂದೆ ಉನ್ನತ ಉದ್ಯೋಗದಲ್ಲಿದ್ದವರೆಂದು ತಿಳಿದುಬಂದಿದೆ. ಇವರ ಸಂಬಂಧಿಕರು ಇದ್ದಲ್ಲಿ ಡಾ.ಎ.ವಿ ಬಾಳಿಗ ಆಸ್ಪತ್ರೆಯ ನಾಗರೀಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

20/08/2021 09:31 pm

Cinque Terre

23.68 K

Cinque Terre

3

ಸಂಬಂಧಿತ ಸುದ್ದಿ