ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೌದಿ ಬಂಧನದಿಂದ ತಾಯ್ನಾಡಿಗೆ ಮರಳಿದ ಹರೀಶ್ ಬಂಗೇರ!

ಕುಂದಾಪುರ: ಸೌದಿ ಬಂಧನದಿಂದ ಹರೀಶ್ ಬಂಗೇರ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದಾರೆ.

ಸೌದಿ ದೊರೆ ಮತ್ತು ಅಲ್ಲಿನ ಧರ್ಮ ನಿಂದನೆ ಆರೋಪದಡಿ ಹರೀಶ್ ಬಂಗೇರ ಅವರನ್ನು ಸೌದಿ ಸರಕಾರ ಬಂಧಿಸಿತ್ತು.

ಹರೀಶ್ ಬಂಗೇರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸೌದಿ ದೇಶ ಮತ್ತು ಅಲ್ಲಿಯ ರಾಜಮನೆತನದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.ಬಳಿಕ ವಿಚಾರಣೆ ನಡೆದು ಹರೀಶ್ ಬಂಗೇರ ಹೆಸರಿನ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಪೋಸ್ಟ್ ಹಾಕಲಾಗಿದೆ ಎಂದು ಸಾಬೀತಾಗಿತ್ತು.

ಹರೀಶ್ ಬಂಗೇರ ಹೆಸರಿನಲ್ಲಿ ನಕಲಿ ಖಾತೆ ತೆಗೆದು ಪೋಸ್ಟ್ ಮಾಡಿದ್ದ ಮೂಡಬಿದಿರೆ ಮೂಲದ ಇಬ್ಬರು ಈ ಕೃತ್ಯ ಎಸಗಿದ ವಿಷಯ ಬೆಳಕಿಗೆ ಬಂದ ಬಳಿಕ,ಉಡುಪಿ ಸೆನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಕೇಂದ್ರ ಸಚಿವಾಲಯದ ಮೂಲಕ ಪ್ರಕರಣದ ಕುರಿತು ಸೌದಿ ಅಧಿಕಾರಗಳ ಜೊತೆ ನಿರಂತರ ಮಾತುಕತೆ ನಡೆದು

ಎರಡು ವರ್ಷಗಳ ಬಳಿಕ ಸೌದಿ ಜೈಲಿನಿಂದ ಬಿಡುಗಡೆಗೊಂಡು ತಾಯ್ನಾಡಿಗೆ ಮರಳಿದ್ದಾರೆ.

ಬೆಂಗಳೂರು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹರೀಶ್ ಬಂಗೇರ ಅವರನ್ನು ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.

Edited By : Shivu K
Kshetra Samachara

Kshetra Samachara

18/08/2021 09:01 am

Cinque Terre

16.94 K

Cinque Terre

1

ಸಂಬಂಧಿತ ಸುದ್ದಿ