ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಉಡುಪಿಯ ಕಾಡಬೆಟ್ಟುನಲ್ಲಿ ನಡೆದ ಸಮಾರಂಭದಲ್ಲಿ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ,ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಗೌರವ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಹಾಗೂ ಉಡುಪಿ ಹಾಜಿ ಅಬ್ದುಲ್ಲ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಇಕ್ಬಲ್ ಮುನ್ನಾ ಇವರ ಸಮಾಜ ಸೇವೆಯನ್ನು ಗುರುತಿಸಿ ಕೆ.ಆರ್.ಎಸ್ ಜಿಲ್ಲಾ ಅಧ್ಯಕ್ಷರಾದ ಅಶೋಕ್ ರಾಜ್ ಕಾಡಬೆಟ್ಟು ಹಾಗೂ ಅವರ ತಂಡವು ಉಡುಪಿ ಜಿಲ್ಲಾ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಅಧ್ಯಕ್ಷ ಎಂ. ಇಕ್ಬಾಲ್ ಕುಂಜಿಬೆಟ್ಟು ,ಕಾರ್ಯದರ್ಶಿ ಹನೀಫ್ ಕಾಪು ,ಕಾನೂನು ಘಟಕ ಅಧ್ಯಕ್ಷ ಭರತ್ ಪೈ ,ಜಿಲ್ಲಾ ಅಲ್ಪಸಂಖ್ಯಾತ ಉಪಾಧ್ಯಕ್ಷ ಜಾಹೀದ ಬಾನು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
15/08/2021 06:21 pm