ಉಡುಪಿ: ಉಡುಪಿಯ ಪಿತ್ರೋಡಿಯ ತನುಶ್ರೀ ಏಳನೇ ವಿಶ್ವದಾಖಲೆಗೆ ಸಜ್ಜಾಗುತ್ತಿದ್ದಾಳೆ.75 ನೇ ಸ್ವಾತಂತ್ರೋತ್ಸವ ಸಂದರ್ಭ ತನುಶ್ರೀ ಮೋಸ್ಟ್ ಯೋಗ ಪೋಸಸ್ ಪರ್ಫಾರ್ಮ್ ಡ್ ಇನ್ ಎ ರಿಲೆಯಲ್ಲಿ ವಿಶ್ವದಾಖಲೆ ಮಾಡುತ್ತಿದ್ದಾಳೆ.ಕೃಷ್ಣಮಠದ ರಾಜಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ,ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ಈ ದಾಖಲೆಗೆ ಸಾಕ್ಷಿಯಾಗಲಿದ್ದಾರೆ.
ಈಗಾಗಲೇ ಆರು ವಿಶ್ವದಾಖಲೆ ಯನ್ನು ತನ್ನ ಹೆಸರಿನಲ್ಲಿ ಬರೆದಿರುವ ತನುಶ್ರೀ ಈಗ ಎಂಟನೇ ತರಗತಿ ವಿದ್ಯಾರ್ಥಿನಿ ಎಂಬುದು ಗಮನಾರ್ಹ.ನಾಟ್ಯಮಯೂರಿ ಮತ್ತು ಯೋಗರತ್ನ ಬಿರುದಾಂಕಿತೆ ತನುಶ್ರೀ ಈ ಮೊದಲು most no. of rolls in one minutes in dhanurasana posture ಎಂಬ ಯೋಗಾಸನ ಭಂಗಿಯನ್ನು ಒಂದು ನಿಮಿಷದಲ್ಲಿ 61 ಬಾರಿ ಮಾಡುವ ಮೂಲಕ ಮತ್ತು most no.of rolls in dhanurasana posture (96 rolls) in 1.40 minutes ನಲ್ಲಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ 2 ವಿಶ್ವದಾಖಲೆಯನ್ನು ಮಾಡಿದ್ದಳು.ಇದಲ್ಲದೆ Most Backwards Body Skip in one minute 1 ನಿಮಿಷಕ್ಕೆ 54 ಬಾರಿ ಮಾಡುವುದರ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ರೆ ಕಾರ್ಡ್ ಮಾಡಿದ್ದಾಳೆ.ಒಟ್ಟು ಆರು ವಿಶ್ವದಾಖಲೆ ಮಾಡಿರುವ ಈಕೆ ಇದೇ ಸ್ವಾತಂತ್ರ್ಯ ದಿನದಂದು ಇನ್ನೊಂದು ದಾಖಲೆಗೆ ಸಜ್ಜಾಗಿದ್ದಾಳೆ.
Kshetra Samachara
12/08/2021 12:58 pm