ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: 14 ಸಾವಿರ ಮೊಳೆಗಳಲ್ಲಿ ಅರಳಿದ ಗಣಪ; ಕಲಾವಿದ ತಿಲಕ್ ಕುಲಾಲ್ ಕೈಚಳಕ

ಮೂಡುಬಿದಿರೆ: ಲೀಫ್ ಆರ್ಟ್ ಮೂಲಕ ರಾಜ್ಯಮಟ್ಟದಲ್ಲಿ ಗಮನಸೆಳೆದ ಮೂಡುಬಿದಿರೆಯ ಚಿತ್ರಕಲಾವಿದ, ಆಳ್ವಾಸ್ ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿ ತಿಲಕ್ ಕುಲಾಲ್ ಕಳೆದ ಒಂದು ತಿಂಗಳಿನಿಂದ ವಿಭಿನ್ನ ರೀತಿಯ ಚಿತ್ರ ಬಿಡಿಸುವಲ್ಲಿ ನಿರತರಾಗಿದ್ದಾರೆ. ಮೊಳೆಗಳನ್ನು ಜೋಡಿಸಿ ಚಿತ್ರ ಬಿಡಿಸುವ ಮೂಲಕ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

14,450 ಮೊಳೆಗಳಲ್ಲಿ ಕಲಾಕೃತಿ: ಲೀಫ್ ಆರ್ಟ್, ಮಣ್ಣಿನ ಪ್ರತಿಮೆ, ಫೈಬರ್ ಪ್ರತಿಮೆ, ಪೆನ್ಸಿಲ್ ಆರ್ಟ್ ಸಹಿತ ಹಲವು ಮಾದರಿಯಲ್ಲಿ ಚಿತ್ರ ಬಿಡಿಸುವಲ್ಲಿ ನಿಪುಣರಾಗಿರುವ ತಿಲಕ್, ಹೊಸತನದೊಂದಿಗೆ ಕಲಾಕೃತಿ ಮಾಡುವ ಉದ್ದೇಶದಿಂದ ಮೊಳೆಗಳನ್ನು ಜೋಡಿಸಿ ಕಲಾಕೃತಿ ಮಾಡುವ ಚಿಂತನೆಯನ್ನು ಕಳೆದ ಒಂದು ತಿಂಗಳ ಹಿಂದೆ ಮಾಡಿದ್ದು, ಕಳೆದ ಎಂಟು ದಿನಗಳನ್ನು ಉಪಯೋಗಿಸಿ ಮೊಳೆಗಳಲ್ಲಿ ಗಣಪತಿಯ ಕಲಾಕೃತಿ ಮಾಡಿದ್ದಾರೆ.

ಬರೋಬರಿ 14,450 ಮೊಳೆಗಳನ್ನು ಜೋಡಿಸಿ 4*2 ಫೀಟ್ ಫ್ಲೈ ವುಡ್ ಮೇಲೆ ಗಣಪತಿ ಚಿತ್ರ ಬಿಡಿಸಿದ್ದಾರೆ. ಮೊದಲು ಮೊಳೆಯೊಂದರಿಂದ ಗಣಪತಿಯ ಚಿತ್ರ ಬಿಡಿಸಿದ್ದು, ಬಳಿಕ ಮೊಳೆಗಳನ್ನು ಜೋಡಿಸಿ ಕಲಾಕೃತಿಯನ್ನು ಸಂಪೂರ್ಣಗೊಳಿಸಿದ್ದಾರೆ. ಇಡೀ ಚಿತ್ರವನ್ನು ಯಾವುದೇ ಬ್ರಶ್, ಬಣ್ಣಗಳನ್ನು ಉಪಯೋಗಿಸದೇ ಮಾಡಿರುವುದು ವಿಶೇಷ. ಕಲಾವಿದನ ಸಹಿ ಕೂಡ ಮೊಳೆಗಳನ್ನೇ ಜೋಡಿಸಿ ಮಾಡಲಾಗಿದೆ.

ಲೀಫ್ ಆರ್ಟ್ನಲ್ಲಿ ಪ್ರಸಿದ್ಧಿ: ತಿಲಕ್ ಅವರು ಕಳೆದ ಮೂರು ವರ್ಷಗಳಿಂದ ಲೀಫ್ ಆರ್ಟ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದವರು. ಮಾಜಿ ಸಿಎಂ ಬಿಎಸ್‌ವೈ, ಅವರ ಪುತ್ರ ವಿಜಯೇಂದ್ರ, ಮಾಜಿ ಸಚಿವ ಸಿ.ಟಿ ರವಿ, ಆನಂದ್ ಗುರೂಜಿ ಸಹಿತ ಹಲವು ಗಣ್ಯ ವ್ಯಕ್ತಿಗಳ ಭಾವಚಿತ್ರಗಳನ್ನು ಎಲೆಯನ್ನು ಮಾಡಿರುವುದಲ್ಲದೆ ಪೊಳಲಿ ಶ್ರೀರಾಜರಾಜೇಶ್ವರಿ, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ಚಿತ್ರಗಳು ಕೂಡ ತಿಲಕ್ ಕೈಚಳಕದಲ್ಲಿ ಎಲೆಯ ಮೇಲೆ ಮೂಡಿದೆ. ಟ್ಯಾಬ್ಲೊಗಳಿಗೆ ಬೃಹತ್ ಆಕಾರದ ವಿವಿಧ ಕಲಾಕೃತಿಗಳನ್ನು ಕೂಡ ತಿಲಕ್ ರಚಿಸಿಕೊಟ್ಟಿದ್ದಾರೆ.

Edited By : Manjunath H D
Kshetra Samachara

Kshetra Samachara

12/08/2021 12:46 pm

Cinque Terre

12.22 K

Cinque Terre

3